ನವದೆಹಲಿ: ಮಾರಕ ಕೊರೋನಾ ಸೋಂಕಿನಿಂದ ಜಗತ್ತಿನ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದ್ದು ಶ್ರೀಮಂತರಿಗೂ ಭರ್ಜರಿ ಶಾಕ್ ನೀಡಿದೆ. ಪೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಶ್ರೀಮಂತರ ಸ್ಥಾನ ಬದಲಾಗಿದೆ.
ಪೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ ಶ್ರೀಮಂತರ ಪಟ್ಟಿಯಲ್ಲಿ ಕೊರೋನಾ ಸೋಂಕಿನಿಂದ ಪರಿಣಾಮ ಉಂಟಾಗಿರುವುದು ಗೊತ್ತಾಗಿದೆ. ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದು, ದಮಾನಿ ಭಾರತದ ಎರಡನೇ ಶ್ರೀಮಂತರಾಗಿದ್ದಾರೆ.
ಆರ್ಥಿಕ ಸಂಕಷ್ಟದಿಂದ ಅನೇಕ ಶತಕೋಟ್ಯಾಧಿಪತಿಗಳ ಸಂಪತ್ತು ಕರಗಿದೆ. ಕಳೆದ ವರ್ಷ 106 ಶತಕೋಟ್ಯಾಧಿಪತಿಗಳು ಇದ್ದರು. ಅವರ ಸಂಖ್ಯೆ 102 ಕ್ಕೆ ಇಳಿಕೆಯಾಗಿದೆ. 2.76 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ಮುಕೇಶ್ ಅಂಬಾನಿ ದೇಶದ ನಂಬರ್ ಒನ್ ಶ್ರೀಮಂತ ಆಗಿದ್ದಾರೆ.
ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಎಲ್ಲಾ ಉದ್ಯಮಿಗಳ ಸಂಪತ್ತು ಕರಗಿಹೋಗಿದ್ದರೂ ಡಿ ಮಾರ್ಟ್ ಸಮೂಹದ ರಾಧಾಕೃಷ್ಣನ್ ದಮಾನಿ 1.03 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ಎರಡನೇ ಶ್ರೀಮಂತರಾಗಿದ್ದಾರೆ. ಕಳೆದ ವರ್ಷ 7 ನೇ ಸ್ಥಾನದಲ್ಲಿದ್ದ ಅವರು ಈ ಬಾರಿ ಎರಡನೇ ಸ್ಥಾನಕ್ಕೇರಿದ್ದಾರೆ.
ಕೊರೊನ : ಕರಗಿತು ಕುಬೇರರ ಸಂಪತ್ತು – ಬದಲಾಯ್ತು ಭಾರತದ ಶ್ರೀಮಂತರ ಸ್ಥಾನ
- Advertisement -
- Advertisement -
- Advertisement -
