Friday, June 5, 2026
Homeಕರಾವಳಿಬೆಳ್ತಂಗಡಿಗೆ ಕೊರೋನಾ ಕಂಟಕ: ಆರಂಬೋಡಿ ಗ್ರಾಮದ ಮಹಿಳೆಗೆ ಕೊರೋನಾ ಸೋಂಕು ದೃಢ

ಬೆಳ್ತಂಗಡಿಗೆ ಕೊರೋನಾ ಕಂಟಕ: ಆರಂಬೋಡಿ ಗ್ರಾಮದ ಮಹಿಳೆಗೆ ಕೊರೋನಾ ಸೋಂಕು ದೃಢ

- Advertisement -
- Advertisement -

ಬೆಳ್ತಂಗಡಿ: ಇಂದಿನವರೆಗೆ ಸೇಫ್ ಜೋನ್ ನಲ್ಲಿದ್ದ ಬೆಳ್ತಂಗಡಿ ತಾಲೂಕಿಗೆ ಮಹಾಮಾರಿ ಕೊರೋನಾ ಪುನಃ ವಕ್ಕರಿಸಿದೆ. ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮಕ್ಕೆ ಬಂದಿದ್ದ 28 ವರ್ಷದ ಯುವತಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ.

ಇದೇ ತಿಂಗಳ 18 ರಂದು ಈ ಮಹಿಳೆ ಮುಂಬೈಯಿಂದ ಬೆಳ್ತಂಗಡಿ ತಾಲೂಕಿಗೆ ಆಗಮಿಸಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಈ ಮಹಿಳೆಯನ್ನು ಕ್ವಾರೆಂಟಿನ್ ನಲ್ಲಿ ಇಡಲಾಗಿತ್ತು. ಇಂದು ಬಂದಿರುವ ಗಂಟಲ ದ್ರವದ ವರದಿಯ ಪ್ರಕಾರ ಇವರಿಗೆ ಸೋಂಕು ತಗುಲಿರುವುದು ದೃಢವಾಗಿದೆ.

ಮಹಿಳೆಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಕೋವಿಡ್ ಜಿಲ್ಲಾಸ್ಪತ್ರೆಗೆ ದಾಖಾಲಿಸಲಾಗಿದೆ.

ಕರ್ನಾಟಕದಲ್ಲಿ ಇಂದು138 ಸೋಂಕಿತರು ಪತ್ತೆ ಒಟ್ಟು ಸೋಂಕಿತರ ಸಂಖ್ಯೆ1743ಕ್ಕೆ ಏರಿಕೆ.
ಚಿಕ್ಕಬಳ್ಳಾಪುರ 47,ಹಾಸನ  14 , ರಾಯಚೂರು 10 , ಬೀದರ 09 , ಮಂಡ್ಯ 08 ತುಮಕೂರು 08 , ವಿಜಯಪುರ 07 , ಬೆಂಗಳೂರು ನಗರ 05 , ಚಿಕ್ಕಮಗಳೂರು 05 , ಬೆಂಗಳೂರು(ಗ್ರಾ)  05, ಹಾವೇರಿ 03 , ಉಡುಪಿ  03 , ದಾವಣಗೆರೆ  03, ಶಿವಮೊಗ್ಗ  02 , ಧಾರವಾಡ 02 , ಯಾದಗಿರಿ 02 , ಬಾಗಲಕೋಟೆ 01 , ಉತ್ತರಕನ್ನಡ 01, ದಕ್ಷಿಣಕನ್ನಡ 01 , ಬೆಳಗಾವಿ 01 ,ಚಿತ್ರದುರ್ಗ  01.               

- Advertisement -

Latest News

error: Content is protected !!