Sunday, April 28, 2024
Homeಕರಾವಳಿಬೆಳ್ತಂಗಡಿಯಲ್ಲಿ ಕೊರೊನಾ ಪಾಸಿಟಿವ್ ಆಗಿದ್ದರೂ ಬಿಡಾ ಮಾರುತ್ತಿದ್ದ ಮಹಿಳೆ: ದಾಳಿ‌ ಮಾಡಿ ಆಸ್ಪತ್ರೆಗೆ ಸೇರಿಸಿದ‌ ಅಧಿಕಾರಿಗಳು.

ಬೆಳ್ತಂಗಡಿಯಲ್ಲಿ ಕೊರೊನಾ ಪಾಸಿಟಿವ್ ಆಗಿದ್ದರೂ ಬಿಡಾ ಮಾರುತ್ತಿದ್ದ ಮಹಿಳೆ: ದಾಳಿ‌ ಮಾಡಿ ಆಸ್ಪತ್ರೆಗೆ ಸೇರಿಸಿದ‌ ಅಧಿಕಾರಿಗಳು.

spot_img
- Advertisement -
- Advertisement -

ಬೆಳ್ತಂಗಡಿ : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಿದ್ದರೂ ಕೊರೊನಾ ಸೋಂಕಿಗೆ ತುತ್ತಾದ ಮಹಿಳೆಯೊಬ್ಬರು  ಬೆಳ್ತಂಗಡಿ ತಾಲೂಕಿನ ಲಾಯಿಲ ಜಂಕ್ಷನ್ ನಲ್ಲಿ ಬಿಡಾ ಮಾರುತ್ತಿದ್ದರು.  ಉತ್ತರ ಪ್ರದೇಶದ 35 ವರ್ಷದ ಮಹಿಳೆಗೆ ಎರಡು ದಿನದಿಂದ ಜ್ವರ ,ಕೆಮ್ಮು,ಶೀತ ಬಂದು ನಂತರ ಪರೀಕ್ಷಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಹೀಗಿದ್ದರೂ ಕೂಡ  ಇಂದು ಅಂಗಡಿಯಲ್ಲಿ ಬಿಡಾ ಮಾರುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ತಹಶೀಲ್ದಾರ್ ಮಹೇಶ್. ಜೆ ನೇತ್ರತ್ವದಲ್ಲಿ ಆರೋಗ್ಯ ಇಲಾಖೆ ,ಪೊಲೀಸ್ ಇಲಾಖೆ ಜೊತೆ  ಅಂಗಡಿ ಮೇಲೆ ರಾತ್ರಿ 7:30 ಕ್ಕೆ ದಾಳಿ ಮಾಡಿದ್ದಾರೆ.

 ಈ ವೇಳೆ ಮಹಿಳೆ ನಮಗೆ ಮೂರು ಮಕ್ಕಳಿದ್ದಾರೆ. ಅಂಗಡಿ ನಡೆಸುವುದು ಅನಿವಾರ್ಯ ಎಂದು ವಾದಕ್ಕೆ ಇಳಿದಿದ್ದಾರೆ. ನಂತರ ತಹಶಿಲ್ದಾರ್ ಸೂಕ್ತ ಎಚ್ಚರಿಕೆ ನೀಡಿ ಆಂಬುಲೆನ್ಸ್ ತರಿಸಿ ಕೋವಿಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಮಹಿಳೆ ಕೋವಿಡ್ ಪರೀಕ್ಷೆ ವೇಳೆ ಸುಳ್ಳು ವಿಳಾಸ ನೀಡಿರುವುದು ಪತ್ತೆಯಾಗಿದೆ.

ಮಹಿಳೆ ಮೂಲತಃ ಉತ್ತರಪ್ರದೇಶದವಳಾಗಿದ್ದು ಬೆಳ್ತಂಗಡಿ ಗುರುದೇವ ಕಾಲೇಜ್ ಬಳಿ ಬಾಡಿಗೆ ಮನೆಯಲ್ಲಿ ತನ್ನ ಮೂರು ಮಕ್ಕಳೊಂದಿಗೆ ವಾಸವಾಗಿದ್ದಾರೆ.

- Advertisement -
spot_img

Latest News

error: Content is protected !!