- Advertisement -
- Advertisement -
ಸುಳ್ಯ: ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಲೆ ನಿಂತಿರುವ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳ ನಿರಾಶ್ರಿತರ ಮಾಹಿತಿ ಮತ್ತು ಯೋಗಕ್ಷೇಮವನ್ನು ಪೊಲೀಸರು ವಿಚಾರಿಸಿದರು.
ಬೆಳ್ಳಾರೆ ಪೊಲೀಸ್ ಠಾಣಾ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಲಾಕ್ಡೌನ್ನಿಂದಾಗಿ ಬೇರೆ ಊರುಗಳಲ್ಲಿ ಸಿಲುಕಿಕೊಂಡಿರುವ ಹೊರ ರಾಜ್ಯದ ಕಾರ್ಮಿಕರು ಮತ್ತು ಮೀನುಗಾರರು ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಕಾರ್ಮಿಕರ ಮಾಹಿತಿ ಹಾಗೂ ಯೋಗಕ್ಷೇಮವನ್ನು ಪೊಲೀಸರು ವಿಚಾರಿಸಿದರು.
ಕಾರ್ಮಿಕರಿಗೆ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಿದರು. ಆಹಾರ ಕೊರತೆ ಬಗ್ಗೆ ಮಾಹಿತಿ ಪಡೆದು, ಪೊಲೀಸರು ತಾವುಗಳು ತಂದಿದ್ದ ಬಾಳೆಹಣ್ಣುಗಳನ್ನು ಕಾರ್ಮಿಕರಿಗೆ ವಿತರಿಸಿದರು. ಸಮಸ್ಯೆಗಳು ಇದ್ದಲ್ಲಿ ತಮಗೆ ತಿಳಿಸುವಂತೆ ಸೂಚಿಸದರು. ಬೆಳ್ಳಾರೆ ಪೊಲೀಸರ ಕಾಳಜಿ ಜನರ ಮೆಚ್ಚುಗೆ ಪಡೆದಿದೆ.
- Advertisement -