- Advertisement -
![]()
- Advertisement -
ಕುಕ್ಕೆ ಸುಬ್ರಹ್ಮಣ್ಯಕ್ಕೆ ದೇವಸ್ಥಾನಕ್ಕೆಂದು ಬಂದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಬಗ್ಗೆ ಸುಬ್ರಮಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಮಾಯಮುಡಿ ಚೆನ್ನಂಗುಳಿ ಗ್ರಾಮದ ರಘು (49) ನಾಪತ್ತೆಯಾದ ವ್ಯಕ್ತಿ.
ಕೊಡಗಿನ ಸುಮಾರು 30 ಜನರ ತಂಡ ಜೂ. 24ರಂದು ಕುಕ್ಕೆಗೆ ಬಂದಿತ್ತು. ಎರಡು ದಿನಗಳ ಕಾಲ ಪೂಜೆ ನೆರವೇರಿಸಿ ಜೂ. 26ರಂದು ಕುಕ್ಕೆಯಿಂದ ತೆರಳುವ ವೇಳೆ ರಘು ನಾಪತ್ತೆಯಾಗಿದ್ದಾರೆ. ಪೇಟೆಯಲ್ಲಿ, ಸುಬ್ರಹ್ಮಣ್ಯ ಸ್ಥಳೀಯ ಪರಿಸರದಲ್ಲಿ ಹುಡುಕಾಡಿದರೂ ರಘು ಅವರು ಪತ್ತೆಯಾಗಿರುವುದಿಲ್ಲ.
ಈ ಬಗ್ಗೆ ಕುಟುಂಬದವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಅವರು ಪತ್ತೆಯಾಗದೇ ಇರುವುದರಿಂದ ಕುಟುಂಬದವರು ಮತ್ತೆ ಸುಬ್ರಹ್ಮಣ್ಯದ ಸ್ಥಳೀಯರನ್ನು ಸಂಪರ್ಕಿಸಿ ವಿವಿಧೆಡೆಗಳಲ್ಲಿ ಹುಡುಕುವ ಪ್ರಯತ್ನ ನಡೆಸುತ್ತಿದ್ದಾರೆ.
- Advertisement -


