Monday, June 8, 2026
Homeಕರಾವಳಿಮಂಗಳೂರುಬೆಳ್ತಂಗಡಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ; ಎಚ್ಚರಿಕೆ ವಹಿಸಲು ಶಾಸಕ ಹರೀಶ್ ಪೂಂಜ ಮನವಿ

ಬೆಳ್ತಂಗಡಿ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ; ಎಚ್ಚರಿಕೆ ವಹಿಸಲು ಶಾಸಕ ಹರೀಶ್ ಪೂಂಜ ಮನವಿ

- Advertisement -
- Advertisement -

ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಎಲ್ಲಾ ಜೀವ ನದಿಗಳು ಉಕ್ಕಿ ಹರಿಯುತ್ತಿದ್ದು ಜಿಲ್ಲೆಯನ್ನು ಸಂಪರ್ಕಿಸುವ ಎಲ್ಲಾ ಪ್ರಮುಖ ರಸ್ತೆಗಳಲ್ಲಿಯೂ ಭೂಕುಸಿತ ಹಾಗೂ ಮರಗಳು ರಸ್ತೆಗೆ ಉರುಳುತ್ತಿರುವ ಘಟನೆಗಳು ಈಗಾಗಲೇ ನಿಮ್ಮೆಲ್ಲರ ಗಮನಕ್ಕೂ ಬಂದಿರುತ್ತದೆ, ಈ ನಿಟ್ಟಿನಲ್ಲಿ ಸಾರ್ವಜನಿಕರು ಅಗತ್ಯ ಸಂಚಾರ ನಡೆಸುವ ಸಂದರ್ಭ ಅತ್ಯಂತ ಹೆಚ್ಚಿನ ಕಾಳಜಿಯನ್ನು ವಹಿಸುವಂತೆ ಶಾಸಕ ಹರೀಶ್ ಪೂಂಜ ವಿನಂತಿಸಿದ್ದಾರೆ.

ಅಲ್ಲದೇ ನಮ್ಮ ಬೆಳ್ತಂಗಡಿ ತಾಲೂಕಿನಲ್ಲಿ ನದಿ ಪಾತ್ರಗಳಲ್ಲಿ ವಾಸಿಸುತ್ತಿರುವ  ಎಲ್ಲಾ ಜನರು ಕೂಡ ತಮ್ಮ ರಕ್ಷಣೆ ಹಾಗೂ ಜಾನುವಾರುಗಳ ರಕ್ಷಣೆಯ ದೃಷ್ಟಿಯಿಂದ ಮುಂಜಾಗ್ರತ ಕ್ರಮಗಳನ್ನು ವಹಿಸಿಕೊಂಡು ಯಾವುದೇ ರೀತಿಯ ಅಪಾಯದ ಮುನ್ಸೂಚನೆ ದೊರೆತ ತಕ್ಷಣ ನಮ್ಮ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಹಾಗು ‘ ಶ್ರಮಿಕ ‘ ತಂಡ ನಿಮ್ಮ ಸಹಾಯಕ್ಕೆ ಸನ್ನದ್ಧವಾಗಿದ್ದು ಈ ಕೆಳಗೆ ನೀಡಲಾದ ತುರ್ತು ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದಿದ್ದಾರೆ.ಹಗಲು ರಾತ್ರಿಯೆನ್ನದೆ ಯಾವುದೇ ಸಮಯದಲ್ಲಾದರೂ ನಿಮ್ಮ ಸಹಾಯಕ್ಕೆ ನಮ್ಮ ತಂಡ ಸದಾ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ,

- Advertisement -

Latest News

error: Content is protected !!