Friday, May 3, 2024
Homeಕರಾವಳಿಉಳ್ಳಾಲದಲ್ಲಿ ಚಾಲಕನಿಲ್ಲದೇ 1. ಕಿ. ಮೀ ಚಲಿಸಿದ ಕಂಟೈನರ್ ಲಾರಿ; ಪವಾಡಸದೃಶವಾಗಿ ಪಾರಾದ ಜನ

ಉಳ್ಳಾಲದಲ್ಲಿ ಚಾಲಕನಿಲ್ಲದೇ 1. ಕಿ. ಮೀ ಚಲಿಸಿದ ಕಂಟೈನರ್ ಲಾರಿ; ಪವಾಡಸದೃಶವಾಗಿ ಪಾರಾದ ಜನ

spot_img
- Advertisement -
- Advertisement -

ಉಳ್ಳಾಲ: ತಲಪಾಡಿ ಟೋಲ್‌ಗೇಟ್‌ನಲ್ಲಿ ಮಂಗಳವಾರ ತಡರಾತ್ರಿ ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಕಂಟೈನರ್ ಲಾರಿಯೊಂದು ಚಾಲಕನಿಲ್ಲದೇ ಒಂದು ಕಿ.ಮೀ ವರೆಗೂ ಹಿಂಬದಿ ಚಲಿಸಿದ ಘಟನೆ ನಡೆದಿದೆ, ಟೋಲ್ ಗೇಟ್‌ಗಳಿಗೆ ಗುದ್ದಿ ಹಾನಿಗೊಳಿಸಿದೆ. ಸೆಕ್ಯುರಿಟಿ ಗಾರ್ಡ್ ಸಹಿತ, ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ.


ದೆಹಲಿಯಿಂದ ಕೊಚ್ಚಿಗೆ ಫ್ರಿಡ್ಜ್ ಸಾಗಣೆ ಮಾಡುತ್ತಿದ್ದ ಗಣಪತಿ ಲಾಜಿಸ್ಟಿಕ್ಸ್ ಸಂಸ್ಥೆಗೆ ಸೇರಿದ ಲಾರಿ ಚಾಲಕ ಜೈವೀರ್ ಸಿಂಗ್ ತಲಪಾಡಿ ಟೋಲ್ ದಾಟಿ ಚಹಾ ಕುಡಿಯಲು ಕಂಟೈನರ್ ಲಾರಿಯನ್ನು ಹೆದ್ದಾರಿ ಬಳಿ ನಿಲ್ಲಿಸಿದ್ದರು. ಚಹಾ ಕುಡಿಯುತ್ತಿದ್ದಂತೆ ತನ್ನಿಂದ ತಾನೇ ಲಾರಿ ಹಿಂಬದಿ ಚಲಿಸಿದ್ದು, ರಿಕ್ಷಾ ಹಾಗೂ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದಿದೆ.
ಹಿಂಬದಿ ಚಲಿಸಿ ಟೋಲ್‌ಗೇಟ್‌ನಲ್ಲಿರುವ ಸೆನ್ಸರ್ ಕಂಬ, ಸೆಕ್ಯುರಿಟಿ ಚೇರ್, ತಡೆಗಲ್ಲಿಗೆ ಗುದ್ದಿ ನಿಂತಿದೆ.

ಈ ನಡುವೆ ಟೋಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸೆಕ್ಯುರಿಟಿ ಸತೀಶ್ ನಾರ್ಲಪಡೀಲು, ಅಶೋಕ್ ಹಾಗೂ ಕೇರಳ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ದಂಪತಿ ಪವಾಡಸದೃಶವಾಗಿ ಪಾರಾಗಿದ್ದಾರೆ. ಹ್ಯಾಂಡ್ ಬ್ರೇಕ್ ಕೈಕೊಟ್ಟ ಪರಿಣಾಮ ಲಾರಿ ಹಿಂಬದಿ ಚಲಿಸಿರುವುದಾಗಿ ಚಾಲಕ ತಿಳಿಸಿದ್ದಾರೆ. ಘಟನೆಯಿಂದ 71 ಲಕ್ಷದಷ್ಟು ನಷ್ಟ ಉಂಟಾಗಿದೆ.


ತಪ್ಪಿದ ಅನಾಹುತ: ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ರಂಜಾನ್ ಮಾಸವಾಗಿದ್ದ ಹಿನ್ನೆಲೆಯಲ್ಲಿ ಕೇರಳ ಕಡೆಯಿಂದ ಬರುವ ಹಾಗೂ ಹೋಗುವ ವಾಹನಗಳು ಅಷ್ಟಾಗಿ ಟೋಲ್‌ನಲ್ಲಿ ಇರಲಿಲ್ಲ. ಅಲ್ಲದೇ ಜನಸಂಚಾರವೂ ವಿರಳವಾಗಿತ್ತು. ಇದರಿಂದಾಗಿ ಭಾರಿ ಅನಾಹುತ ತಪ್ಪಿದೆ ಎಂದು ಟೋಲ್ ಪಿ.ಆರ್.ಒ ಭಾಸ್ಕರ್ ತಲಪಾಡಿ ಪ್ರತಿಕ್ರಿಯಿಸಿದ್ದಾರೆ.

- Advertisement -
spot_img

Latest News

error: Content is protected !!