Saturday, June 13, 2026
Homeತಾಜಾ ಸುದ್ದಿಮಂಗಳೂರು: ಮಹಾವೀರ ವೃತ್ತದ ಕಲಶ ನಿರ್ಮಾಣ ಸದ್ಯದಲ್ಲಿಯೇ ಆರಂಭ

ಮಂಗಳೂರು: ಮಹಾವೀರ ವೃತ್ತದ ಕಲಶ ನಿರ್ಮಾಣ ಸದ್ಯದಲ್ಲಿಯೇ ಆರಂಭ

- Advertisement -
- Advertisement -

ಮಂಗಳೂರು: ಮಂಗಳೂರು ನಗರದ ಪಂಪ್‌ವೆಲ್‌ನ ಮಹಾವೀರ ವೃತ್ತದಲ್ಲಿ ಆಕರ್ಷಣೆಯಾಗಿ ವಿರಾಜಮಾನವಾಗಿದ್ದ ಬೃಹತ್ ಕಲಶವು ಮತ್ತೂಮ್ಮೆ ಅದೇ ಜಾಗದಲ್ಲಿ ಕಂಗೊಳಿಸುವ ನಿರೀಕ್ಷೆಯಲ್ಲಿದೆ.


ಜೈನ ಸಮುದಾಯದ ವತಿಯಿಂದ ನೂತನ ಕಲಶ ನಿರ್ಮಾಣವಾಗಲಿದೆ. ಮೇಲ್ವೇತುವೆ ಕಾಮಗಾರಿ ವೇಳೆ ಕೆಲವು ವರ್ಷಗಳ ಹಿಂದೆ ಪಂಪ್‌ವೆಲ್ ಪ್ರದೇಶದಲ್ಲಿದ್ದ ಕಲಶವನ್ನು ತೆರವುಗೊಳಿಸಲಾಗಿತ್ತು.


ಆ ವೇಳೆ ತೀವ್ರ ಆಕ್ಷೇಪ ಬಂದರೂ, ಬಳಿಕ ಅದೇ ಪ್ರದೇಶದಲ್ಲಿ ಕಲಶ ಮರು ಸ್ಥಾಪಿಸುವ ನಿಟ್ಟಿನಲ್ಲಿ ಜನಪ್ರತಿನಿಧಿಗಳಿಗೆ ಭರವಸೆ ಬಂದಿತ್ತು. ಆದರೆ, ಪಂಪ್‌ವೆಲ್ ಮೇಲ್ವೇತುವೆ ಉದ್ಘಾಟನೆಗೊಂಡರೂ, ಕಲಶ ನಿರ್ಮಾಣಕ್ಕೆ ಮಾತ್ರ ಮುಂದಾಗಿರಲಿಲ್ಲ. ಜೈನ ಸಮುದಾಯ ಮತ್ತೆ ಪಾಲಿಕೆಗೆ ಮನವಿ ಸಲ್ಲಿಸಿದ್ದು, ಪಾಲಿಕೆ ಕೂಡ ಬಹುತೇಕ ಸಮ್ಮತಿ ನೀಡಿದೆ. ಅದರಂತೆ ಸದ್ಯದಲ್ಲೇ ಕಲಶ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ.


ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ 2003ರ ಜನವರಿ ತಿಂಗಳಿನಲ್ಲಿ ಆರಂಭಗೊಂಡು 6 ತಿಂಗಳ ಬಳಿಕ ಉದ್ಘಾಟನೆ ನೆರವೇರಿತ್ತು. ಪಂಪ್‌ವೆಲ್ ಮೇಲ್ವೇತುವೆ ಕಾಮಗಾರಿ ವೇಳೆ ಈ ಕಲಶವನ್ನು ತೆರವು ಗೊಳಿ ಸಲಾಗಿತ್ತು. ಬಳಿಕ ಅಲ್ಲೇ ಹತ್ತಿರದಲ್ಲಿ ಕಂಕನಾಡಿ ರಸ್ತೆ ತಿರುವು ಪ್ರವೇಶದಲ್ಲಿ ಇಡಲಾಗಿದೆ. ಇದೀಗ ಮಹಾವೀರ ವೃತ್ತ ಮತ್ತು ಕಲಶ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ.

- Advertisement -

Latest News

error: Content is protected !!