Sunday, June 7, 2026
Homeತಾಜಾ ಸುದ್ದಿಉರಿಗೌಡ-ನಂಜೇಗೌಡ ಹೆಸರಲ್ಲಿ ಅಣಕು ಆಧಾರ್ ಕಾರ್ಡ್ ಬಿಡುಗಡೆ ಮಾಡಿದ ಕಾಂಗ್ರೆಸ್; ಉರಿಗೌಡ ಮತ್ತು ನಂಜೇಗೌಡರಿಗೆ ಅಶ್ವಥ್...

ಉರಿಗೌಡ-ನಂಜೇಗೌಡ ಹೆಸರಲ್ಲಿ ಅಣಕು ಆಧಾರ್ ಕಾರ್ಡ್ ಬಿಡುಗಡೆ ಮಾಡಿದ ಕಾಂಗ್ರೆಸ್; ಉರಿಗೌಡ ಮತ್ತು ನಂಜೇಗೌಡರಿಗೆ ಅಶ್ವಥ್ ನಾರಾಯಣ್ ತಾಯಿ ಹಾಗೂ ಸಿ.ಟಿ.ರವಿ ತಂದೆ

- Advertisement -
- Advertisement -

ಬೆಂಗಳೂರು:  ಸದ್ಯ ರಾಜ್ಯ ರಾಜಕೀಯದಲ್ಲಿ ಉರಿಗೌಡ- ನಂಜೇಗೌಡ ಭಾರೀ ಸದ್ದು ಮಾಡುತ್ತಿದ್ದಾರೆ. ಮುನಿರತ್ನ  ಉರಿಗೌಡ- ನಂಜೇಗೌಡರ ಬಗ್ಗೆ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿ ಬಳಿಕ ಹಿಂದೆ ಸರಿದ ಬೆನ್ನಲ್ಲೇ ಕಾಂಗ್ರೆಸ್ ಅಣಕು ಆಧಾರ್ ಕಾರ್ಡ್ ಬಿಡುಗಡೆ ಮಾಡಿ ಬಿಜೆಪಿಗೆ ಟಾಂಗ್ ಕೊಟ್ಟಿದೆ.

ಅಣಕು ಆಧಾರ್ ನಲ್ಲಿ ಉರಿಗೌಡ ಮತ್ತು ನಂಜೇಗೌಡರಿಗೆ ಅಶ್ವಥ್ ನಾರಾಯಣ್ ತಾಯಿ ಹಾಗೂ ಸಿ.ಟಿ.ರವಿ ತಂದೆ. ಇವರಿಬ್ಬರೂ ಹುಟ್ಟಿದ್ದು ಚುನಾವಣೆ ಹತ್ತಿರ ಬಂದಾಗ. ಇವರ ಜನ್ಮಸ್ಥಳ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಎಂದು ಬರೆಯಲಾಗಿದೆ.

ಅನೇಕ ಸಂಶೋಧನೆಯ ಬಳಿಕ ಸಿಕ್ಕಿದೆ. ಉರಿಗೌಡ, ನಂಜೇಗೌಡರ ಆಧಾರ್ ಕಾರ್ಡ್ ನಂಬರ್ 420 420 420 420 ಎಂದು ಆಧಾರ್ ಕಾರ್ಡ್ ನಲ್ಲಿ ಬರೆಯಲಾಗಿದೆ.

- Advertisement -

Latest News

error: Content is protected !!