Saturday, June 6, 2026
Homeತಾಜಾ ಸುದ್ದಿನಟಿ ಸಂಯುಕ್ತ ಹೆಗ್ಡೆಗೆ ಥಳಿತ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕಿ ಕವಿತಾ ರೆಡ್ಡಿ ಬಂಧನ

ನಟಿ ಸಂಯುಕ್ತ ಹೆಗ್ಡೆಗೆ ಥಳಿತ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ನಾಯಕಿ ಕವಿತಾ ರೆಡ್ಡಿ ಬಂಧನ

- Advertisement -
- Advertisement -

ಬೆಂಗಳೂರು: ಉದ್ಯಾನವನದಲ್ಲಿ ನಟಿ ಸಂಯುಕ್ತಾ ಹೆಗ್ಡೆ ಮತ್ತು ಅವರ ಸ್ನೇಹಿತೆಯರ ಜತೆ ಜಗಳ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಕವಿತಾ ರೆಡ್ಡಿಯನ್ನ ಎಚ್‌ಎಸ್‌ಆರ್‌ ಪೊಲೀಸರು ಬಂಧಿಸಿದ್ದಾರೆ.

ಸರ್ಜಾಪುರ ರಸ್ತೆಯ ಅಗರ ಕೆರೆಯ ಉದ್ಯಾನದಲ್ಲಿ ಶುಕ್ರವಾರ ನಡೆದ ಕಿತ್ತಾಟದ ಕುರಿತು ನಟ ಸಂಯುಕ್ತಾ ಹೆಗ್ಡೆ, ಎಚ್‌ಎಸ್‌ಆರ್‌ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪಾರ್ಕ್‌ನಲ್ಲಿ ವರ್ಕೌಟ್ ನಡೆಸುತ್ತಿದ್ದ ಸಂಯುಕ್ತಾ ಹೆಗ್ಡೆ ಸರಿಯಾದ ರೀತಿ ಬಟ್ಟೆ ಧರಿಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದ ಕವಿತಾ ರೆಡ್ಡಿ, ಸಂಯುಕ್ತಾ ಸ್ನೇಹಿತೆ ಮೇಲೆ ಹಲ್ಲೆ ನಡೆಸಿದ್ದರು. ಕವಿತಾ ರೆಡ್ಡಿಯವರನ್ನು ಐಪಿಸಿ ಸೆಕ್ಷನ್‌ಗಳಾದ 323, 504 (b) ಮತ್ತು 506 ಅಡಿ ಎಚ್‌ಎಸ್ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

https://www.instagram.com/tv/CEtwP4plMhN/?utm_source=ig_embed

- Advertisement -

Latest News

error: Content is protected !!