Saturday, June 27, 2026
Homeಕರಾವಳಿಉಡುಪಿತಲೆಗೆ ಟೋಪಿ ಹಾಕಿದ ಹಾಗೆ ಮುಖಕ್ಕೆ ಮಾಸ್ಕ್ ಧರಿಸಬೇಕೆಂದು ಬಸ್ ಕಂಡಕ್ಟರ್ ಕೊಟ್ಟ ವಾರ್ನಿಂಗ್ ಫುಲ್...

ತಲೆಗೆ ಟೋಪಿ ಹಾಕಿದ ಹಾಗೆ ಮುಖಕ್ಕೆ ಮಾಸ್ಕ್ ಧರಿಸಬೇಕೆಂದು ಬಸ್ ಕಂಡಕ್ಟರ್ ಕೊಟ್ಟ ವಾರ್ನಿಂಗ್ ಫುಲ್ ವೈರಲ್

- Advertisement -
- Advertisement -

ಉಡುಪಿ: ಕುಂದಾಪುರದಿಂದ ಉಡುಪಿಗೆ ಸಾಗುವ ಖಾಸಗಿ ಬಸ್ಸೊಂದಕ್ಕೆ ಮಾಸ್ಕ್ ಧರಿಸದೇ ಹತ್ತಿದ ಇಬ್ಬರು‌ ಮುಸ್ಲಿಂ ಯುವಕರಿಗೆ ಬಸ್ ಕಂಡಕ್ಟರ್ ಒಬ್ಬರು ಈ ಸಂಧಿಗ್ಧ ಪರಿಸ್ಥಿತಿಯಲ್ಲಿ ಅವಶ್ಯಕವಾದ ಮಾರ್ಗಸೂಚಿಯಾದ ಮಾಸ್ಕ್ ಧಾರಣೆ ಬಗ್ಗೆ ತಿಳಿ ಹೇಳಿ ಬಸ್ ನಿಂದ ಕೆಳಗಿಳಿಸಿದ ಘಟನೆ ನಡೆದಿದ್ದು, ಸದ್ಯ ಆ ವಿಡಿಯೋ ವೈರಲ್ ಆಗಿದೆ.

ಘಟನೆಯ ವಿವರ
ನಿನ್ನೆ ರಾತ್ರಿ ಕುಂದಾಪುರದಿಂದ ಉಡುಪಿಗೆ ತೆರಳುವ ಬಸ್ಸಿಗೆ ಇಬ್ಬರು ಮುಸ್ಲಿಂ ಯುವಕರು ಹತ್ತಿದ್ದಾರೆ. ಆದರೆ ಇಬ್ಬರು ಮಾಸ್ಕ್ ಧರಿಸದ ಕಾರಣ ಬಸ್ ನಿರ್ವಾಹಕ ಆಕ್ಷೇಪಿಸಿದ್ದಾನೆ. ಆದರೆ ಇಬ್ಬರು ಪ್ರಯಾಣಿಕರು ತಮಗೂ ಕೊರೋನಾ ಮಾರ್ಗಸೂಚಿಗೂ ಯಾವುದೇ ರೀತಿಯ ಸಂಬಂಧವೇ ಇಲ್ಲ ಎಂಬಂತೆ ವರ್ತಿಸಿದ್ದು ಅಲ್ಲದೆ ಕಂಡಕ್ಟರ್ ತೋರಿಸಿದ ಸಾಮಾಜಿಕ ಕಳಕಳಿಯನ್ನು ವ್ಯಂಗ್ಯವಾಗಿ ಅಪಹಾಸ್ಯ ಮಾಡಿದ ಘಟನೆ ನಡೆದಿದೆ.

ಕನ್ನಡ ಗೊತ್ತಿದ್ದರೂ ಹಿಂದಿಯಲ್ಲಿ ಮಾತನಾಡುತ್ತಿದ್ದ ಯುವಕರು ಕಂಡಕ್ಟರ್ ಜೊತೆ ವಾಗ್ವಾದಕ್ಕೆ ಇಳಿದಿದ್ದಾರೆ. ಕೂಡಲೇ ಕಂಡೆಕ್ಟರ್ ರ ಸಹಕಾರಕ್ಕೆ ಬಂದ ಸಹ ಪ್ರಯಾಣಿಕರು ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡು ಬಸ್ಸಿನಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!