Wednesday, May 8, 2024
Homeತಾಜಾ ಸುದ್ದಿಸಮುದ್ರದಲ್ಲಿ ತೇಲಿ ಬರ್ತಿದೆ ತ್ಯಾಜ್ಯ ಜಿಡ್ಡು : ಆತಂಕಗೊಂಡ ಮೀನುಗಾರರು: ತನಿಖೆಗೆ ಎನ್ ಜಿಟಿಯಿಂದ ಸಮಿತಿ...

ಸಮುದ್ರದಲ್ಲಿ ತೇಲಿ ಬರ್ತಿದೆ ತ್ಯಾಜ್ಯ ಜಿಡ್ಡು : ಆತಂಕಗೊಂಡ ಮೀನುಗಾರರು: ತನಿಖೆಗೆ ಎನ್ ಜಿಟಿಯಿಂದ ಸಮಿತಿ ನಿಯೋಜನೆ

spot_img
- Advertisement -
- Advertisement -

ಮಂಗಳೂರು: ಇತ್ತೀಚೆಗೆ ಸುರತ್ಕಲ್ ಗುಡ್ಡೆಕೊಪ್ಪ ಬಳಿ ಸಮುದ್ರದಲ್ಲಿ ಜಿಡ್ಡಾದ ವಸ್ತು ಹಾಗೂ ಟಾರಿನ ಉಂಡೆ ತೇಲಿ ಬಂದಿದ್ದವು. ಅಷ್ಟು ಮಾತ್ರವಲ್ಲದೇ ತಣ್ಣೀರುಬಾವಿಯ ಬಳಿ ಕೆಲವು ಮೀನುಗಾರರು ತಾವು ಫಲ್ಗುಣಿ ನದಿಯಲ್ಲಿ ಬೆಳೆಸಿದ್ದ ಪಂಜರ ಕೃಷಿಯ ಮೀನುಗಳು ಸಾನ್ನಪ್ಪಿರುವ ಬಗ್ಗೆ ದೂರಿದ್ದರು. ಇವೆಲ್ಲವನ್ನೂ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ)ದ ಪ್ರಧಾನ ಪೀಠವು, ಮಾಲಿನ್ಯದ ಮೂಲ ಪತ್ತೆ ಹಚ್ಚಲು ಜಂಟಿ ಸಮಿತಿಯೊಂದನ್ನು ರಚಿಸಿದೆ.

ಸಮಿತಿಯು ಎರಡು ವಾರದೊಳಗೆ ಸಭೆ ಸೇರಿ ಸ್ಥಳ ಸಮೀಕ್ಷೆ, ಅಧ್ಯಯನ ನಡೆಸಬೇಕು. ಸ್ಥಳೀಯರೊಂದಿಗೆ ಮಾತುಕತೆ ನಡೆಸಬೇಕು. ಎರಡು ತಿಂಗಳೊಳಗೆ ಎನ್‌ಜಿಟಿಗೆ ವರದಿ ನೀಡಬೇಕು ಎಂದು ತಿಳಿಸಲಾಗಿದೆ.

ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಧಿಕಾರಿ, ಕೋಸ್ಟ್‌ಗಾರ್ಡ್‌ನ ಮಂಗಳೂರು ಘಟಕ, ಕೇಂದ್ರೀಯ ಮೀನು ಸಂಶೋಧನಾ ಸಂಸ್ಥೆ ಹಾಗೂ ಚೆನ್ನೈನ ಸಾಗರ ಅಭಿವೃದ್ಧಿ ವಿಭಾಗದ ಅಧಿಕಾರಿಗಳು ಸಮಿತಿಯಲ್ಲಿದ್ದಾರೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಈ ತನಿಖೆಗೆ ನೋಡಲ್ ಏಜೆನ್ಸಿಯಾಗಿದೆ

- Advertisement -
spot_img

Latest News

error: Content is protected !!