Wednesday, June 3, 2026
Homeಕರಾವಳಿಉಡುಪಿಮಲ್ಪೆ, ಮೂಲ್ಕಿ ಹೆಸರಿನ 2 ಜಲಾಂತರ್ಗಾಮಿ ನಿಗ್ರಹ ಹಡಗುಗಳ ಲೋಕಾರ್ಪಣೆ

ಮಲ್ಪೆ, ಮೂಲ್ಕಿ ಹೆಸರಿನ 2 ಜಲಾಂತರ್ಗಾಮಿ ನಿಗ್ರಹ ಹಡಗುಗಳ ಲೋಕಾರ್ಪಣೆ

- Advertisement -
- Advertisement -

ಮಂಗಳೂರು: ಕರಾವಳಿಯ ಪ್ರಮುಖ ಸ್ಥಳಗಳಾದ ಮಲ್ಪೆ ಮತ್ತು ಮೂಲ್ಕಿ ಎಂಬ ಹೆಸರನ್ನು ಹೊಂದಿರುವ ಆಳವಿಲ್ಲದ ನೀರಿನಲ್ಲಿ ಚಲಿಸಬಲ್ಲ 2 ಜಲಾಂತರ್ಗಾಮಿ ನಿಗ್ರಹ ಹಡಗುಗಳನ್ನು ಭಾರತೀಯ ನೌಕಾಪಡೆಯು ಮಂಗಳವಾರದಂದು ಲೋಕಾರ್ಪಣೆ ಮಾಡಿದೆ .

ಈ ಹಡಗುಗಳನ್ನು ಭಾರತೀಯ ನೌಕಾಪಡೆ ತಯಾರಿಸಿದ್ದು, ಸಂಪೂರ್ಣವಾಗಿ ದೇಶೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ತಯಾರು ಮಾಡಲಾಗಿದೆ ಎನ್ನಲಾಗಿದೆ.

ಇನ್ನು ಈ ಮೊದಲೇ ಇಂತಹ 2 ಹಡಗುಗಳನ್ನು ನೌಕಾಪಡೆಯ ವಶಕ್ಕೆ ನೀಡಲಾಗಿತ್ತು. ಈ ಹಡಗುಗಳಲ್ಲಿ ನೀರಿನಾಳದಲ್ಲಿರುವ ವಸ್ತುಗಳನ್ನು ಗುರುತಿಸಬಲ್ಲ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಹಾಗೆಯೇ ತೀರ ಪ್ರದೇಶದಲ್ಲಿ ಮೈನ್‌ (ನೆಲಬಾಂಬ್‌)ಗಳನ್ನು ಪತ್ತೆ ಹಚ್ಚಲು, ಜಲಂತರ್ಗಾಮಿಗಳ ಸಂಚಾರದ ಮೇಲೆ ಕಣ್ಣಿಡಲು ಇವು ಸಹಾಯ ಮಾಡುತ್ತವೆ.

ಈವರೆಗೂ ಒಟ್ಟು 16 ಜಲಂತರ್ಗಾಮಿ ನಿಗ್ರಹ ಹಡಗುಗಳನ್ನು ತಯಾರು ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆಯೇ ಕೊಚ್ಚಿ ಹಾಗೂ ಕೋಲ್ಕತಾದಲ್ಲಿರುವ ಸಂಸ್ಥೆಗಳು ತಲಾ 8 ಹಡಗುಗಳನ್ನು ತಯಾರು ಮಾಡಲಿವೆ. ಇದಕ್ಕಾಗಿ ಕೇಂದ್ರ ಸರಕಾರದ ಜತೆಗೆ 2019ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!