Sunday, June 29, 2025
Homeಕರಾವಳಿಸುಳ್ಯ : ಕ್ಯಾಶ್ಯೂ ಫ್ಯಾಕ್ಟರಿಯ ಗೋಡೆ ಕುಸಿತ; ವ್ಯಾಪಾರಿ ಸಾವು!

ಸುಳ್ಯ : ಕ್ಯಾಶ್ಯೂ ಫ್ಯಾಕ್ಟರಿಯ ಗೋಡೆ ಕುಸಿತ; ವ್ಯಾಪಾರಿ ಸಾವು!

spot_img
- Advertisement -
- Advertisement -

ಸುಳ್ಯ : ಮಲ್ನಾಡು ಕ್ಯಾಶೂ ಫ್ಯಾಕ್ಟರಿಯ ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದು ವ್ಯಾಪಾರಿಯೊಬ್ಬರು ಮೃತಪಟ್ಟ ದಾರುಣ ಘಟನೆ ಇಂದು ಬೆಳಿಗ್ಗೆ ಸುಳ್ಯದ ಗಾಂಧಿನಗರದಲ್ಲಿ ನಡೆದಿದೆ.

ಮೃತಪಟ್ಟ ವ್ಯಾಪಾರಿಯನ್ನು ಅಬ್ದುಲ್ ಖಾದರ್ (ಅಂದುಕಾರ್) ಎಂದು ಹೇಳಲಾಗಿದೆ . ಇವರು ಕಳೆದ ಹಲವಾರು ವರ್ಷಗಳಿಂದ ಸುಳ್ಯದ ಎಪಿಎಂಸಿ ಬಳಿ ಗುಜಿರಿ ವ್ಯಾಪಾರ ಮಾಡುತ್ತಿದ್ದು, ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಆಗಲಿದ್ದಾರೆ.

ಸಾಮಾಗ್ರಿಗಳನ್ನು ಖರೀದಿಸಿ ಮಾರಾಟ ಮಾಡುವ ವ್ಯಾಪಾರ ಮಾಡುತಿದ್ದ ಇವರು ಮಲ್ನಾಡು ಕ್ಯಾಶೂ ಫ್ಯಾಕ್ಟರಿಯಲ್ಲಿದ್ದ ಕಬ್ಬಿಣ ಸಾಮಾಗ್ರಿಗಳನ್ನು ಸಂಗ್ರಹಿಸುವ ಈ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಅಬ್ದುಲ್ ಖಾದರ್‌ರವರು ತಮ್ಮ ಕೆಲಸದಾಳುಗಳ ಜೊತೆ ಶುಕ್ರವಾರ ಬೆಳಿಗ್ಗೆ ಗೋಡೆಯ ಮೇಲ್ಬಾಗದಲ್ಲಿದ್ದ ಕಬ್ಬಿಣದ ಟ್ರಸ್‌ನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಗೋಡೆಯು ಮಗುಚಿ ಅಬ್ದುಲ್ ಖಾದರ್‌ರವರ ಮೇಲೆ ಬಿದ್ದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ.

- Advertisement -
spot_img

Latest News

error: Content is protected !!