Saturday, June 6, 2026
Homeಕರಾವಳಿಮಂಗಳೂರು; ತೆಂಗಿನಮರ  ಬಿದ್ದು ಬಾಲಕ‌ ಸಾವು

ಮಂಗಳೂರು; ತೆಂಗಿನಮರ  ಬಿದ್ದು ಬಾಲಕ‌ ಸಾವು

- Advertisement -
- Advertisement -

ಮಂಗಳೂರು: ಭಾರೀ ಗಾಳಿಗೆ ಬಾಲಕನ ಮೇಲೆ ತೆಂಗಿನ ಮರವೊಂದು ಮುರಿದು ಬಿದ್ದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಕಾಸರಗೋಡಿನ ಬಂದ್ಯೊಡ್ ಕಯ್ಯಾರ್ ನಲ್ಲಿ ನಡೆದಿದೆ.

ಪತ್ರಕರ್ತ ಸ್ಟೀಫನ್ ಕ್ರಾಸ್ತಾ ಅವರ ಪುತ್ರ ಸೋನು ಕ್ರಾಸ್ತಾ (13) ಮೃತ ಬಾಲಕ.

ಬಾಲಕ ಸೋನು ಕ್ರಾಸ್ತಾ ಮನೆ ಬಳಿಯ ತೋಟದಲ್ಲಿದ್ದ ವೇಳೆ ಭಾರೀ ಗಾಳಿ ಬಂದಿದೆ. ಗಾಳಿಯ ರಭಸಕ್ಕೆ ತೆಂಗಿನ ಮರವೊಂದು ಮುರಿದು ಬಾಲಕನ ಮೈ ಮೇಲೆ ಬಿದ್ದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ.ತಕ್ಷಣ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

- Advertisement -

Latest News

error: Content is protected !!