Sunday, May 19, 2024
Homeಕರಾವಳಿಉಡುಪಿಬೆಳಗ್ಗಿನ ಆಝಾನ್ ವಿಚಾರದಲ್ಲಿ ಇನ್ನೆರಡು ದಿನಗಳಲ್ಲಿ ಕರಾವಳಿ ಭಾಗದ ಉಲೆಮಾಗಳ ಸಭೆ ; ರಾಜ್ಯ ವಕ್ಫ್...

ಬೆಳಗ್ಗಿನ ಆಝಾನ್ ವಿಚಾರದಲ್ಲಿ ಇನ್ನೆರಡು ದಿನಗಳಲ್ಲಿ ಕರಾವಳಿ ಭಾಗದ ಉಲೆಮಾಗಳ ಸಭೆ ; ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿಕೆ

spot_img
- Advertisement -
- Advertisement -

ಉಡುಪಿ: ಲೌಡ್ ಸ್ಪೀಕರ್ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಲ್ಲಿ ಇದೆ. ಅದನ್ನು ಎಲ್ಲಾ ಮಸೀದಿಗಳಿಗೆ ಆದೇಶ ಕಳುಹಿಸಿದ್ದೇವೆ ಎಂದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ಶಾಫಿ ಸಅದಿ,
ಬೆಳಗ್ಗಿನ ಪ್ರಾರ್ಥನೆ ಬಗ್ಗೆ ವಕ್ಫ್ ಬೋರ್ಡ್ ನಿರ್ಧಾರ ಮಾಡಲ್ಲ.
ಆಜಾನ್, ಷರಿಯತ್ ನ ವಿಚಾರಗಳ ಬಗ್ಗೆ ಉಲೆಮಾಗಳು, ಧಾರ್ಮಿಕ ಮುಖಂಡರು ಅಭಿಪ್ರಾಯ ಹೇಳಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಒಗ್ಗಟ್ಟಿನ ತೀರ್ಮಾನ ತೆಗೆದುಕೊಂಡಿದ್ದು,
ಕರಾವಳಿ ಭಾಗದ ಉಲೆಮಾಗಳು ಸಭೆ ಸೇರಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಇನ್ನೆರಡು ದಿನದಲ್ಲಿ ಕರಾವಳಿ ಭಾಗದ ಉಲಮಾಗಳ ಸಭೆ ನಡೆಯಲಿದೆ ಎಂದು ಹೇಳಿದ್ದಾರೆ.

ಭಾರತದ ಮುಸಲ್ಮಾನರು ಕೋರ್ಟ್ ತೀರ್ಪು ಗರಿಷ್ಠ ಪಾಲನೆ ಮಾಡುತ್ತಾರೆ. ನಮ್ಮಿಂದ ಯಾವುದೇ ಗೊಂದಲಗಳು ಆಗದಂತೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಹೇಳಿದ್ದಾರೆ.

- Advertisement -
spot_img

Latest News

error: Content is protected !!