Friday, May 17, 2024
Homeಕರಾವಳಿಉಡುಪಿನರೇಗಾ ಹಬ್ಬದಲ್ಲಿ ಉಡುಪಿ ಜಿಲ್ಲೆಗೆ 5, ದ.ಕ. ಜಿಲ್ಲೆಗೆ 3, ಉ.ಕ. ಜಿಲ್ಲೆಗೆ 2, ಕೊಡಗು...

ನರೇಗಾ ಹಬ್ಬದಲ್ಲಿ ಉಡುಪಿ ಜಿಲ್ಲೆಗೆ 5, ದ.ಕ. ಜಿಲ್ಲೆಗೆ 3, ಉ.ಕ. ಜಿಲ್ಲೆಗೆ 2, ಕೊಡಗು ಜಿಲ್ಲೆಗೆ 5 ಪ್ರಶಸ್ತಿ

spot_img
- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ನರೇಗಾ ಹಬ್ಬ 2022 ಕಾರ್ಯಕ್ರಮವನ್ನು ಉದ್ಘಾಟಿಸಿ ನರೇಗಾ ವಾರ್ಷಿಕ ಪ್ರಶಸ್ತಿ, ವಿಶೇಷ ಪ್ರಶಸ್ತಿ ಹಾಗೂ ಅಧಿಕಾರಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.‌

ಈ ಪೈಕಿ ಉಡುಪಿ ಜಿಲ್ಲೆಗೆ‌ 5, ದಕ್ಷಿಣ ಕನ್ನಡ ಜಿಲ್ಲೆಗೆ 3, ಉತ್ತರ ಕನ್ನಡ ಜಿಲ್ಲೆಗೆ 2 ಮತ್ತು ಕೊಡಗು ಜಿಲ್ಲೆಗೆ 5 ಪ್ರಶಸ್ತಿ ಪ್ರಶಸ್ತಿಗಳು ಲಭಿಸಿವೆ.ಜಿ.ಪಂ. ಸಿಇಓ ವಿಭಾಗದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್ ವೈ. ಅವರಿಗೆ ಪ್ರಶಸ್ತಿ ಲಭಿಸಿದೆ.

ನರೇಗಾ ಉಸ್ತುವಾರಿ ಉಪ ಕಾರ್ಯದರ್ಶಿ ವಿಭಾಗದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಾಬು ಎಂ., ಜಿಲ್ಲಾ ಎಂ.ಐ.ಎಸ್. ಸಂಯೋಜಕ ವಿಭಾಗದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಡಿಐಎಂಎಸ್ ವಿಜಯ ಶ್ಯಾಮ್, ಮತ್ತು ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ವಿಭಾಗದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ರವೀಶ್ ಹೆಚ್.ಪಿ. ಅವರಿಗೆ ಪ್ರಶಸ್ತಿ ದೊರೆತಿದೆ.

ತಾಲೂಕು ಐಇಸಿ ಸಂಯೋಜಕ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕು ಟಿಇಸಿ ಭರತ್ ರಾಜ್,‌ ತಾಲೂಕು ತಾಂತ್ರಿಕ ಸಂಯೋಜಕ ವಿಭಾಗದಲ್ಲಿ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ತಾಂತ್ರಿಕ ಸಂಯೋಜಕ ನಿರಂಜನ್ ಪಿ. ಮತ್ತು ತಾಂತ್ರಿಕ ಸಹಾಯಕ ಅಭಿಯಂತರ ವಿಭಾಗದಲ್ಲಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ತಾಂತ್ರಿಕ ಸಹಾಯಕ ಕಿಶೋರ್ ಅವರಿಗೆ ಪ್ರಶಸ್ತಿ ಲಭಿಸಿದೆ.

ಪಿಡಿಓ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಪಿಡಿಓ ಸೀತಾರಾಮ ಆಚಾರಿ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ಪಿಡಿಓ ರಮೇಶ ತಿಮ್ಮಾರೆಡ್ಡಿ, ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮ ಪಂಚಾಯತ್ ಪಿಡಿಓ ಮಹಾದೇವ ಪ್ರಭು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮ ಪಂಚಾಯತ್ ಪಿಡಿಓ ಮೋಹನ್ ಬಂಗೇರ ಪ್ರಶಸ್ತಿ ವಿಜೇತರಾಗಿದ್ದಾರೆ.

ಡಾಟಾ ಎಂಟ್ರಿ ಆಪರೇಟರ್ ವಿಭಾಗದಲ್ಲಿ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಲ್ಯಮಂಡೂರು ಗ್ರಾಮ ಪಂಚಾಯತ್ ನ ಡಾಟಾ ಎಂಟ್ರಿ ಆಪರೇಟರ್ ಅರ್ಚನಾ ಬಿ.ಕೆ., ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮ ಪಂಚಾಯತ್ ಡಾಟಾ ಎಂಟ್ರಿ ಆಪರೇಟರ್ ಜಯಂತಿ, ಗ್ರಾಮ ಕಾಯಕ ಮಿತ್ರ ವಿಭಾಗದಲ್ಲಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಮ ಪಂಚಾಯತ್ ನ ದೀಪಾ ಬಸವರಾಜ ಹರಿಜನ ಮತ್ತು ಅಕೌಂಟ್ಸ್ ಮ್ಯಾನೇಜರ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಕೌಂಟ್ಸ್ ಮ್ಯಾನೇಜರ್ ನಿಶಾಂತ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.‌

- Advertisement -
spot_img

Latest News

error: Content is protected !!