Saturday, June 27, 2026
Homeಕರಾವಳಿಉಡುಪಿಉಡುಪಿ: ಕ್ಲಿನಿಕ್, ಆಸ್ಪತ್ರೆಗಳು ನೋಂದಾವಣಿ ಪದ್ಧತಿಯಲ್ಲಿ ಸೇವೆ ನೀಡಬೇಕು: ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆ

ಉಡುಪಿ: ಕ್ಲಿನಿಕ್, ಆಸ್ಪತ್ರೆಗಳು ನೋಂದಾವಣಿ ಪದ್ಧತಿಯಲ್ಲಿ ಸೇವೆ ನೀಡಬೇಕು: ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಣೆ

- Advertisement -
- Advertisement -

ಉಡುಪಿ : ಜಿಲ್ಲೆಯಲ್ಲಿ ನೋಂದಾಯಿಸಲ್ಪಟ್ಟ ಕ್ಲಿನಿಕ್ ಹಾಗೂ ಆಸ್ಪತ್ರೆ ಗಳು ನೋಂದಾವಣೆಯಾದ ಪದ್ಧತಿಯಲ್ಲಿ ನಿಯಮಾನುಸಾರವಾಗಿ ಸೇವೆ ನೀಡಬೇಕು. ಆಯುರ್ವೇದ ಪದ್ಧತಿಯೊಂದಿಗೆ ಇಂಟಿಗ್ರೇಟೆಡ್ ಡಿಪ್ಲೋಮಾ ಕೋರ್ಸ್‌ಗಳನ್ನು ಮಾಡಿ ಪ್ರಮಾಣ ಪತ್ರ ಹೊಂದಿರುವ ವೈದ್ಯರುಗಳು ಆಧುನಿಕ ವೈದ್ಯ ಪದ್ಧತಿಯಲ್ಲಿ ವೈದ್ಯ ವೃತ್ತಿ ನಡೆಸಲು ಅವಕಾಶವಿದೆ.

ನೋಂದಾವಣಿ ಹೊಂದಿರುವ ಪದ್ಧತಿಯನ್ನು ಬಿಟ್ಟು ಇನ್ನೊಂದು ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು ಕಂಡು ಬಂದಲ್ಲಿ ತಾಲೂಕು ಪ್ರಾಧಿಕೃತ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

- Advertisement -

Latest News

error: Content is protected !!