Saturday, June 6, 2026
Homeಕರಾವಳಿಉಡುಪಿಬೈಂದೂರು: ಮೂಗನಂತೆ ನಟಿಸಿ ಭಿಕ್ಷಾಟನೆ ಮಾಡುತ್ತಿದ್ದ ಯುವಕನಿಗೆ ಸ್ಥಳೀಯರಿಂದ ಕ್ಲಾಸ್

ಬೈಂದೂರು: ಮೂಗನಂತೆ ನಟಿಸಿ ಭಿಕ್ಷಾಟನೆ ಮಾಡುತ್ತಿದ್ದ ಯುವಕನಿಗೆ ಸ್ಥಳೀಯರಿಂದ ಕ್ಲಾಸ್

- Advertisement -
- Advertisement -

ಬೈಂದೂರು: ಉತ್ತರ ಪ್ರದೇಶ ಹಾಗೂ ಇತರ ರಾಜ್ಯದಿಂದ ಬಂದು ಇತರೆ ಕಾರಣ ಹೇಳಿ ಸುಳ್ಳು ಹೇಳಿ ಭಿಕ್ಷಾಟನೆ ಮಾಡುತ್ತಿದ್ದ ವ್ಯಕ್ತಿಗೆ ಸ್ಥಳೀಯರು ಕ್ಲಾಸ್ ತೆಗೆದುಕೊಂಡ ಘಟನೆ ಕುಂದಾಪುರದಲ್ಲಿ ನಡೆದಿದೆ.

ಉತ್ತರಪ್ರದೇಶದ ಮೂಲದವನಾದ ಈತ ತನಗೆ ಕಾಲು ಸರಿ ಇಲ್ಲ ಹಾಗೂ ಮಾತು ಬರುವುದಿಲ್ಲ ಎನ್ನುವ ಹಾಗೆ ಸುಳ್ಳು ಡಾಕ್ಟರ್ ಸರ್ಟಿಫಿಕೇಟ್ ಮಾಡಿಕೊಂಡು ಕುಂದಾಪುರದ ಆಸುಪಾಸಿನಲ್ಲಿ ಸುಮಾರು ದಿನಗಳಿಂದ ತಿರುಗಾಡುತ್ತಿದ್ದು. ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಬಳಿ ತೆರಳಿ ಈ ಸರ್ಟಿಫಿಕೇಟ್ ತೋರಿಸಿ, ದೊಡ್ಡ ಡ್ರಾಮಾ ಮಾಡಿ ಹಣ ಪಡೆಯುತ್ತಿದ್ದ.

ಈತ ಹಲವು ಊರುಗಳಲ್ಲಿ ಇದೇ ರೀತಿ ನಾಟಕ ಮಾಡಿದ್ದು ಈತನ ನಾಟಕ ಎಲ್ಲೂ ಕೂಡ ಬಯಲಾಗಿರಲಿಲ್ಲ. ಮನುಷ್ಯನ ನಾಟಕದ ಜೀವನ ಕೆಲವು ದಿನ ಎನ್ನುವಂತೆ ಕುಂದಾಪುರದ ಪರಿಸರದಲ್ಲಿ ಈತ ಸಿಕ್ಕಿ ಬಿದ್ದಿದ್ದಾನೆ. ಈ ಯುವಕ ದಾರಿ ಮೇಲೆ ಹೋಗುವಾಗ ಸರಿಯಾಗಿ ನಡೆದುಕೊಂಡು ಬಂದಿದ್ದು, ಮನೆ ಕಾಣಿಸಿದಾಗ ಮಾತ್ರ ಮೂಗ ಹಾಗೂ ಕುಂಟನಂತೆ ಡ್ರಾಮಾ ಮಾಡುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನ ಸುಮಾರು 1 ಗಂಟೆ ಹೆಚ್ಚು ಸಮಯ ವಿಚಾರಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ.

- Advertisement -

Latest News

error: Content is protected !!