Wednesday, April 14, 2021
Home ಕರಾವಳಿ ಬೆಂದೂರು ಚರ್ಚ್ ಗೆ ಕನ್ನ ಹಾಕಿದ ಖದೀಮ: 4.98 ಲಕ್ಷ ರೂಪಾಯಿ ನಗದು ಕಳ್ಳತನ

ಬೆಂದೂರು ಚರ್ಚ್ ಗೆ ಕನ್ನ ಹಾಕಿದ ಖದೀಮ: 4.98 ಲಕ್ಷ ರೂಪಾಯಿ ನಗದು ಕಳ್ಳತನ

- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ದಿನೇ ದಿನೇ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ. ಇದೀಗ ಚರ್ಚ್ ಒಂದಕ್ಕೆ ಖದೀಮನೊಬ್ಬ ಕನ್ನ ಹಾಕಿದ್ದಾನೆ. ಬೆಂದೂರ್ ಚರ್ಚ್ ಆಫೀಸ್ ಗೆ ನುಗ್ಗಿ ಲಕ್ಷಾಂತರ ರೂಪಾಯಿ ಹಣ ಎಗರಿಸಿದ್ದಾರೆ.

ಏಪ್ರಿಲ್ 5 ರಂದು ಮುಂಜಾನೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ ಪಾದ್ರಿ ಅವರು ಬೆಳಿಗ್ಗೆ 6.30 ಕ್ಕೆ ಚರ್ಚ್ ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ತೆರಳಬೇಕಿತ್ತು. ಹೀಗಾಗಿ ಅವಸರದಲ್ಲಿ ಹೊರಟ ಅವರು ಕಚೇರಿಯ ಬಾಗಿಲಿಗೆ ಬೀಗ ಹಾಕಲು ಮರೆತಿದ್ದರು. ಇದೇ ವೇಳೆ ಕಚೇರಿಗೆ ನುಗ್ಗಿದ ಅಪರಿಚಿತ ವ್ಯಕ್ತಿ 4.98 ಲಕ್ಷ ರೂ. ಕದ್ದು ಪರಾರಿಯಾಗಿದ್ದಾನೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕದ್ರಿ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದರು. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
- Advertisment -

Latest News

error: Content is protected !!