Wednesday, April 16, 2025
Homeಕರಾವಳಿಮಂಗಳೂರಿನಲ್ಲಿ ಕಾಲರಾ ಭೀತಿ; ಜಿಲ್ಲಾ ಆರೋಗ್ಯಾಧಿಕಾರಿಯಿಂದ ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

ಮಂಗಳೂರಿನಲ್ಲಿ ಕಾಲರಾ ಭೀತಿ; ಜಿಲ್ಲಾ ಆರೋಗ್ಯಾಧಿಕಾರಿಯಿಂದ ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

spot_img
- Advertisement -
- Advertisement -

ಮೂಡುಬಿದ್ರಿ: ಇಲ್ಲಿನ ನೆಲ್ಲಿಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯಕ್ತಿಯೊಬ್ಬರಿಗೆ ಕಾಲರಾ ರೋಗ ದೃಢಪಟ್ಟಿದ್ದು, ವ್ಯಕ್ತಿಯು ಸದ್ಯ ಚೇತರಿಕೆ ಕಾಣುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹೇಳಿದರು.

ಇನ್ನು ಉಳಿದಂತೆ ಜಿಲ್ಲೆಯಲ್ಲಿ ಈ ವರ್ಷ ಯಾವುದೇ ಮಂಕಿಪಾಕ್ಸ್, ನಿಫಾ ಪ್ರಕರಣಗಳು ಕಂಡುಬಂದಿಲ್ಲ ಎಂದರು.

ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಉಡುಪಿ ಜಿಲ್ಲೆಯ ಹೋಟೆಲೊಂದರಲ್ಲಿ ಆ ವ್ಯಕ್ತಿಯು ಆಹಾರ ತಿಂದಿದ್ದು, ನಂತರದಲ್ಲಿ ಆತನಿಗೆ ಕಾಲರಾ ಕಾಣಿಸಿದೆ. ಸದ್ಯಕ್ಕೆ ಆತಂಕದ ಲಕ್ಷಣವಿಲ್ಲ. ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳಿಗೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ. ಹೋಟೆಲ್ ಮಾಲಕರ‌ ಸಂಘದ ಸಭೆ ನಡೆಸಿ ಕಾಲರಾ ತಡೆಯುವ ಉದ್ದೇಶಕ್ಕೆ ಗ್ರಾಹಕರಿಗೆ ಶುದ್ಧ ಬಿಸಿ, ಆರಿಸಿದ ಕುಡಿಯುವ ನೀರು ಕೊಡುವಂತೆ ಸಹಿತ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ. ಜಿ.ಪಂ. ಸಿಇಒ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳ ವಿಶೇಷ ಸಭೆ ನಡೆಸಿದ್ದು, ಎಲ್ಲಾ ಓವರ್ ಹೆಡದ ಟ್ಯಾಂಕ್ ಅನ್ನು ಮೂರು ತಿಂಗಳೊಳಿಗೊಮ್ಮೆ ಸ್ವಚ್ಛಗೊಳಿಸುವಂತೆ ಸೂಚಿಸಿದ್ದಾರೆ,” ಎಂದು ತಿಳಿಸಿದರು.

- Advertisement -
spot_img

Latest News

error: Content is protected !!