Saturday, April 27, 2024
Homeಕರಾವಳಿಬೆಳ್ತಂಗಡಿ: 2 ವಾರದ ಅಂತರದಲ್ಲಿ 4 ನಾಯಿಗಳನ್ನು  ಕೊಂಡೊಯ್ದ ಚಿರತೆ

ಬೆಳ್ತಂಗಡಿ: 2 ವಾರದ ಅಂತರದಲ್ಲಿ 4 ನಾಯಿಗಳನ್ನು  ಕೊಂಡೊಯ್ದ ಚಿರತೆ

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಲಾಯಿಲ ಗ್ರಾಮದ ಲಾಯಿಲಬೈಲು ಎಂಬಲ್ಲಿ ಸಾಕು ನಾಯಿಗಳನ್ನು ಚಿರತೆ ದಾಳಿ ನಡೆಸಿ ಕೊಂಡೊಯ್ದಿರುವ ಘಟನೆ ನಡೆದಿದೆ.

ಕಳೆದ ಎರಡು ವಾರಗಳಿಂದ ಚಿರತೆ ಕಾಟ ಹೆಚ್ಚಿದೆ ಎಂದು ನಾಗರಿಕರು ಮಾಹಿತಿ ನೀಡಿದ್ದಾರೆ. ವಾರಗಳ ಹಿಂದೆ ಗಾಣದಕೊಟ್ಯ ಎಂಬಲ್ಲಿಂದ ಕಟ್ಟಿ ಹಾಕಿದ ನಾಯಿಯೊಂದನ್ನು , ದಡ್ಡು ಲಿಂಬಯ್ಯ ದೇವಾಡಿಗ ಎಂಬವರ ಎರಡು ನಾಯಿಗಳನ್ನು , ಸೋಮವಾರ ರಾತ್ರಿ ಲಾಯಿಲಬೈಲು ಇನಾಸ ಎಂಬವರ ಸಾಕು ನಾಯಿಯನ್ನು ದಾಳಿ ನಡೆಸಿ ಕೊಂಡೊಯ್ದಿದೆ.

ಈ ಬಗ್ಗೆ ಬೆಳ್ತಂಗಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇಂದು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಹಿಡಿಯುವ ಕಾರ್ಯಚರಣೆ ನಡೆಸಲಿದ್ದಾರೆ ಎಂದು ಲಾಯಿಲ ಉಪ ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!