Wednesday, June 3, 2026
Homeಕರಾವಳಿಮಂಗಳೂರುಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣ; ಉಪ್ಪಿನಂಗಡಿ ಮೂಲದ ಚಿನ್ಮಯಿ ಶೆಟ್ಟಿ ಸಾವು

ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣ; ಉಪ್ಪಿನಂಗಡಿ ಮೂಲದ ಚಿನ್ಮಯಿ ಶೆಟ್ಟಿ ಸಾವು

- Advertisement -
- Advertisement -

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ ಸಿಬಿ ವಿಜಯೋತ್ಸವದ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಉಪ್ಪಿನಂಗಡಿಯ ಇಳಂತಿಲ ಮೂಲದ ಕರುಣಾಕರ ಶೆಟ್ಟಿ, ತಾಯಿ ಪೂಜಾ ದಂಪತಿ ಪುತ್ರಿ ಚಿನ್ಮಯಿ ಶೆಟ್ಟಿ (20) ಸಾವನ್ನಪ್ಪಿದ್ದಾರೆ.


ಚಿನ್ಮಯಿ ಶೆಟ್ಟಿ ತಂದೆ ಕರುಣಾಕರ ಬೆಂಗಳೂರಿನ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿದ್ದಾರೆ. ಓರ್ವ ಸಹೋದರ ಬ್ಯಾಂಕ್ ಉದ್ಯೋಗಿ. ಪ್ರಸ್ತುತ ಈ ಕುಟುಂಬ ಬೆಂಗಳೂರಿನ ನಾರಾಯಣ ನಗರದಲ್ಲಿ ನೆಲೆಸಿದ್ದಾರೆ. ಓದಿನಲ್ಲೂ ಮುಂದಿದ್ದ  ಈಕೆ ಬೆಂಗಳೂರಿನ ಕನಕಪುರ ರಸ್ತೆಯ ಯಲಚನಹಳ್ಳಿ ಜ್ಯೋತಿ ಇಂಜಿನಿಯಂಗ್ ವ್ಯಾಸಂಗ ಮಾಡುತ್ತಿದ್ದರು., ಕ್ರೀಡೆಯಲ್ಲೂ ಸಾಧಕಿ. ಯಕ್ಷ ತರಂಗ ಯಕ್ಷಗಾನ ತರಬೇತಿ ಪಡೆಯುತ್ತಿದ್ದರು.

ಮೃತ ಚಿನ್ಮಯಿ ಶೆಟ್ಟಿ ಅಜ್ಜಿ ಮನೆ ಇರೋದು ಉಪ್ಪಿನಂಗಡಿಯ ಇಳಂತಿಲ ಎಂಬಲ್ಲಿ, ಆದರೆ ಚಿನ್ಮಯಿ ಕುಟುಂಬ ಮೂಲಃತಹ ಕುಶಾಲನಗರದವರು. ಚಿನ್ಮಯಿ ಕುಟುಂಬ ಇಳಂತಿಲದಲ್ಲಿ ಜಾಗ ಖರೀದಿಸಿತ್ತು . ಸದ್ಯ ಮನೆಯಲ್ಲಿ ಇರೋದು ಚಿನ್ಮಯಿ ಅಜ್ಜಿ ಮತ್ತು ಚಿಕ್ಕಪ್ಪ ಮಾತ್ರ. ಚಿನ್ಮಯಿ ಕುಟುಂಬ ಸದ್ಯ ಬೆಂಗಳೂರಿನಲ್ಲೇ ನೆಲೆಸಿದ್ದು, ಉಪ್ಪಿನಂಗಡಿಯ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದರು.

- Advertisement -

Latest News

error: Content is protected !!