Saturday, May 4, 2024
HomeWorldಪೂರ್ವ ಲಡಾಖ್​ ಸಮೀಪ ಮೂರು ಮೊಬೈಲ್​ ಟವರ್​ ನಿರ್ಮಿಸಿದ ಚೀನಾ..!

ಪೂರ್ವ ಲಡಾಖ್​ ಸಮೀಪ ಮೂರು ಮೊಬೈಲ್​ ಟವರ್​ ನಿರ್ಮಿಸಿದ ಚೀನಾ..!

spot_img
- Advertisement -
- Advertisement -

ನವದೆಹಲಿ: ಚೀನಾ ಪೂರ್ವ ಲಡಾಖ್‌ನ ಹಾಟ್ ಸ್ಪ್ರಿಂಗ್ಸ್‌ನಲ್ಲಿ LAC ಗೆ ಸಮೀಪದಲ್ಲಿ ಮೂರು ಮೊಬೈಲ್ ಟವರ್‌ಗಳನ್ನು ನಿರ್ಮಿಸಿದೆ. ಇದನ್ನು ಚಿತ್ರ ಸಮೇತವಾಗಿ ಲಡಾಖ್​ನ ಚುಶುಲ್​​ನ ಕೌನ್ಸಿಲರ್ ಕೊಂಚೋಕ್ ಸ್ಟಾಂಜಿನ್ ಬಹಿರಂಗಪಡಿಸಿದ್ದಾರೆ.

ಪ್ಯಾಂಗಾಂಗ್ ಸರೋವರದ ಮೇಲಿನ ಸೇತುವೆಯನ್ನು ಪೂರ್ಣಗೊಳಿಸಿದ ನಂತರ, ಚೀನಾವು ಭಾರತದ ಭೂಪ್ರದೇಶಕ್ಕೆ ಸಮೀಪವಿರುವ ಚೀನಾದ ಬಿಸಿನೀರಿನ ಬುಗ್ಗೆ ಬಳಿ 3 ಮೊಬೈಲ್ ಟವರ್‌ಗಳನ್ನು ಸ್ಥಾಪಿಸಿದೆ.
ಈ ಕುರಿತು ಟ್ವೀಟ್‌ ಮಾಡಿರುವ ಸ್ಟಾಂಜಿನ್ , ಇದು ಆತಂಕಕಾರಿಯಲ್ಲವೇ?. ನಮ್ಮಲ್ಲಿ ಜನವಸತಿ ಗ್ರಾಮಗಳಲ್ಲೇ 4ಜಿ ಸೌಲಭ್ಯವಿಲ್ಲ. ನನ್ನ ಕ್ಷೇತ್ರದ ವ್ಯಾಪ್ತಿಯ 11 ಹಳ್ಳಿಗಳಲ್ಲೂ 4ಜಿ ಸೌಲಭ್ಯವಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಲಡಾಖ್ ಎಲ್‌ ಎಸಿಯಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಆ ಬಳಿಕ ಚೀನಾ ಸಣ್ಣ ಹಳ್ಳಿ‌ ನಿರ್ಮಿಸಿದೆ ಎಂದು ವರದಿಯಾಗಿತ್ತು. ಇದೀಗ ಮೊಬೈಲ್ ಟವರನ್ನು ಚೀನಾ ನಿರ್ಮಿಸಿದೆ.

ಇದೀಗ ಚೀನಾ ಭಾರತ ಮತ್ತು ಚೀನಾ ಸೇನೆಗಳು ನಿರಂತರವಾಗಿ ನಿಯೋಜನೆಗೊಂಡಿದ್ದು, ಉದ್ವಿಗ್ನ ಪರಿಸ್ಥಿತಿ ಇದೆ.

- Advertisement -
spot_img

Latest News

error: Content is protected !!