Thursday, June 4, 2026
Homeಕರಾವಳಿಸೀಮೆಎಣ್ಣೆ ಕುಡಿದು ಒಂದು ವರ್ಷದ ಮಗು ಸಾವು

ಸೀಮೆಎಣ್ಣೆ ಕುಡಿದು ಒಂದು ವರ್ಷದ ಮಗು ಸಾವು

- Advertisement -
- Advertisement -

ಕಾಸರಗೋಡು: ಸೀಮೆಎಣ್ಣೆ ಸೇವಿಸಿದ ಪರಿಣಾಮ ಒಂದೂವರೆ ವರ್ಷದ ಮಗು ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಋತಿಕ್ (1) ಮೃತಪಟ್ಟ ಮಗು. ಮನೆಯಲ್ಲಿ ಆಟವಾಡುತ್ತಿದ್ದ ಋತಿಕ್ ಗೊತ್ತಿಲ್ಲದೆ ಬಾಟಲಿಯಲ್ಲಿದ್ದ ಸೀಮೆಎಣ್ಣೆ ಕುಡಿದಿದ್ದಾನೆ. ಪರಿಣಾಮ ಅಸ್ವಸ್ಥವಾಗಿ ಬಿದ್ದಿದ್ದರಿಂದ ತಕ್ಷಣವೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.

- Advertisement -

Latest News

error: Content is protected !!