Saturday, June 20, 2026
Homeಚಿಕ್ಕಮಗಳೂರುಚಿಕ್ಕಮಗಳೂರು: ಮೂವರು ಅಪ್ರಾಪ್ತ ಬಾಲಕಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ; ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯನ ವಿರುದ್ಧ...

ಚಿಕ್ಕಮಗಳೂರು: ಮೂವರು ಅಪ್ರಾಪ್ತ ಬಾಲಕಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ ಆರೋಪ; ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯನ ವಿರುದ್ಧ 3 ಪ್ರಕರಣ ದಾಖಲು

- Advertisement -
- Advertisement -

ಚಿಕ್ಕಮಗಳೂರು: ಮೂವರು ಅಪ್ರಾಪ್ತ ಬಾಲಕಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯನ ವಿರುದ್ಧ 3 ಪ್ರಕರಣ ದಾಖಲಾಗಿರುವ ಘಟನೆ ಕಡೂರು ತಾಲೂಕಿನ ಹಳ್ಳಿಯೊಂದರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಶಿಕ್ಷಕ ನಾಗರಾಜಪ್ಪ, ಮುಖ್ಯೋಪಾಧ್ಯಾಯ ಲೋಕೇಶಪ್ಪ ವಿರುದ್ಧ ಪ್ರಕರಣ ದಾಖಲಾಗಿದೆಯ

ಶಿಕ್ಷಕ ನಾಗರಾಜಪ್ಪ ಮೂವರು ಮಕ್ಕಳಿಗೆ ಲೈಂಗಿಕ ದೌರ್ಜನ್ಯ ನೀಡಿದ್ದ ಎಂದು ಆರೋಪಿಸಲಾಗಿದ್ದು, ಶಿಕ್ಷಕ ಮಗುವಿನ ಕೈನಲ್ಲಿ ಮನೆಯಿಂದ ಫೋನ್ ತರಿಸಿ ಲೈಂಗಿಕ ವಿಡಿಯೋ, ಮೆಸೇಜ್ ಕಳಿಸಿದ್ದ ಎನ್ನಲಾಗಿದೆ. ಮಕ್ಕಳು ಧರಿಸಿಕೊಂಡು ಬಂದ ಬಟ್ಟೆಗಳ ಬಗ್ಗೆ ಪ್ರಶ್ನೆ ಕೇಳಿ, ಚೆಕ್ ಮಾಡಿದ್ದ ಎನ್ನಲಾಗಿದ್ದು, ಶಿಕ್ಷಕ ನಾಗರಾಜಪ್ಪ ಮೂವರು ಅಪ್ರಾಪ್ತ ಮಕ್ಕಳಿಗೂ ಅದೇ ರೀತಿ ಮಾಡಿದ್ದ ಎಂಬ ಆರೋಪ ಕೇಳಿ ಬಂದಿದೆ.ಯಾರಿಗೂ ಹೇಳದಂತೆ ಹೆದರಿಸಿ ದೇವರ ಮೇಲೆ ಆಣೆ ಮಾಡಿಸಿಕೊಂಡಿದ್ದಾನೆ. ಪೋಷಕರು ಮುಖ್ಯೋಪಾಧ್ಯಾಯರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ. ಇದೀಗ ಶಿಕ್ಷಕ ನಾಗರಾಜಪ್ಪ ಹಾಗೂ ಲೋಕೇಶಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಚಿ ಪೊಲೀಸ್ ಠಾಣೆಯಲ್ಲಿ ಮೂವರು ಮಕ್ಕಳಿಂದ ಪ್ರತ್ಯೇಕ ದೂರು ದಾಖಲಾಗಿದೆ.

- Advertisement -

Latest News

error: Content is protected !!