Wednesday, July 2, 2025
Homeಕರಾವಳಿಪುತ್ತೂರು ; ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಹೆಸರಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

ಪುತ್ತೂರು ; ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಹೆಸರಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ

spot_img
- Advertisement -
- Advertisement -

ಪುತ್ತೂರು ; ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮ ಹೆಸರಲ್ಲಿ ಮಹಿಳೆಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದಲ್ಲಿ ನಡೆದಿದೆ.

ಚಿಕ್ಕಮುಡ್ನೂರು ನಿವಾಸಿಯಾದ ಝೀನತ್  ಬಾನು ಎಂಬವರಿಗೆ 2022 ನೇ ಮೇ ತಿಂಗಳಲ್ಲಿ  ಅಪರಿಚಿತ ವ್ಯಕ್ತಿ ವಾಟ್ಸಾಪ್ ಕರೆ ಮಾಡಿ ತಾನು ಕೌನ್ ಬನೇಗಾ ಕರೋಡಪತಿ ಎಂಬ ಕಾರ್ಯಕ್ರಮದಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನೀವು ರೂ. 25 ಲಕ್ಷ ಲಾಟರಿ ಗೆದ್ದಿದ್ದೀರಿ ಎಂದಿದ್ದಾನೆ.

ನಂತರ ಹಣ ಪಡೆಯಲು ನೀವು ಟ್ಯಾಕ್ಸ್ ಕಟ್ಟಲು ಹಾಗೂ ಇನ್ನಿತರ ಚಾರ್ಜಸ್ ಗಳು ಇವೆ ಎಂದು ಹೇಳಿ ಝೀನತ್ ಅವರಿಂದ 2022 ಮೇ ತಿಂಗಳಿನಿಂದ 2023 ಸೆಪ್ಟಂಬರ್ 13 ರವರೆಗಿನ ಅವಧಿಯಲ್ಲಿ ಅಪರಿಚಿತ ವ್ಯಕ್ತಿ ವಿವಿಧ ಬ್ಯಾಂಕ್ ಖಾತೆಗಳಿಗೆ  ಸುಮಾರು  ರೂ. 12,93,200/-  ಹಣವನ್ನು ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಈ ಬಗ್ಗೆ  ದಕ್ಷಿಣ ಕನ್ನಡ ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಕ್ರ ಅ.ಕ್ರ: 29/2023 ಕಲಂ: 66(D), IT act  417 420 IPC ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -
spot_img

Latest News

error: Content is protected !!