
ಮಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಕ್ಯೂಆರ್ ಕೋಡ್ ಕಳುಹಿಸಿ ಕಂಪೆನಿಯೊಂದರ ಮ್ಯಾನೇಜರ್‌ಗೆ ಮೋಸ ಮಾಡಿದ ಘಟನೆ ಮಂಗಳೂರಲ್ಲಿ ನಡೆದಿದೆ.
ಮಂಗಳೂರು ನಗರದ ಕಂಪೆನಿಯಲ್ಲಿ ಮ್ಯಾನೇಜರ್ ಆಗಿರುವ ದೂರುದಾರ ವ್ಯಕ್ತಿಗೆ ಅಪರಿಚಿತ ವ್ಯಕ್ತಿಯೊಬ್ಬ6900789640 ಮತ್ತು 9735403133 ಸಂಖ್ಯೆಯಿಂದ ಕರೆ ಮಾಡಿ ತಾನು ಭಾರತೀಯ ಸೇನೆಯ ಸೇವಕ ಎಂದು ಪರಿಚಯಿಸಿದ್ದಾನೆ. 300 ಚೀಲ ಸಿಮೆಂಟ್ ಬೇಕು ಹಾಗೂ ಸಾಲ ಬೇಕೂಂತ ಕೇಳಿ ಕ್ಯೂರ್ ಆರ್ ಕೋಡ್‌ನ್ನು ಮ್ಯಾನೇಜರ್‌ನ ಪೋನ್ ಪೇ ನಂಬರ್‌ಗೆ ಕಳುಹಿಸಿದ. ಆತ ತಿಳಿಸಿದಂತೆ ಮ್ಯಾನೇಜರ್ 1 ರೂಪಾಯಿಯನ್ನು ಯುಪಿಐ ಮುಖಾಂತರ ಪಾವತಿಸಿದರು.
ಅನಂತರ ಅಪರಿಚಿತ ವ್ಯಕ್ತಿಯು 4 ಕ್ಯೂಆರ್ ಕೋಡ್‌ನ್ನು ವಾಟ್ಸಪ್ ಮೂಲಕ ಮ್ಯಾನೇಜರ್‌ಗೆ ಕಳುಹಿಸಿದ.ಮ್ಯಾನೇಜರ್ ಆ ಕ್ಯೂಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದ ಕೂಡಲೆ ಅಪರಿಚಿತ ವ್ಯಕ್ತಿ ಮ್ಯಾನೇಜರ್‌ನ ಐಡಿಎಫ್‌ಸಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 96,996 ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ದೂರು ನೀಡಲಾಗಿದೆ.
ಈ ಬಗ್ಗೆ ಮಂಗಳೂರು ನಗರದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


