Sunday, June 7, 2026
Homeಕರಾವಳಿಮಂಗಳೂರು: ಪೊಲೀಸ್ ಎಂದು ಹೇಳಿ ಮಹಿಳೆಗೆ ವಂಚನೆ

ಮಂಗಳೂರು: ಪೊಲೀಸ್ ಎಂದು ಹೇಳಿ ಮಹಿಳೆಗೆ ವಂಚನೆ

- Advertisement -
- Advertisement -

ಮಂಗಳೂರು: ತಾನು ಪಾಂಡೇಶ್ವರ ಮಹಿಳಾ ಠಾಣೆಯ ಪೊಲೀಸ್ ಹೇಳಿ ವ್ಯಕ್ತಿಯೊಬ್ಬ ಮಹಿಳೆಯನ್ನು ಹೆದರಿಸಿ ಅವರಿಂದ ಹಣ ವಸೂಲಿ ಮಾಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಹಿಳೆಯು ಈ ಹಿಂದೆ ಮಸಾಜ್ ಪಾರ್ಲರ್ ನಡೆಸಿಕೊಂಡಿದ್ದರು ಎನ್ನಲಾಗಿದೆ.ಈ ಮಹಿಳೆಯ ಬಳಿ ವ್ಯಕ್ತಿಯೊಬ್ಬ ತಾನು ಪೊಲೀಸ್ ಎಂದು ಹೇಳಿಕೊಂಡು “ನೀವು ಅಕ್ರಮ ಚಟುವಟಿಕೆ ಮಾಡುತ್ತಿದ್ದೀರಿ. ಅದನ್ನು ಮುಚ್ಚಿ ಹಾಕಲು ಹಣ ನೀಡಬೇಕು” ಎಂದು ಬೆದರಿಸಿ ಗೂಗಲ್ ಪೇ ಮೂಲಕ ಬುಧವಾರ ಮತ್ತು ಗುರುವಾರ ಒಟ್ಟು 38,000 ರೂ. ವರ್ಗಾಯಿಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

 ಆರೋಪಿಯು ಪೊಲೀಸರ ಸಮವಸ್ತ್ರದಲ್ಲಿ ಮಹಿಳೆಯ ಮನೆಗೆ ಹೋಗಿ ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ‌.

- Advertisement -

Latest News

error: Content is protected !!