Thursday, June 4, 2026
Homeಕರಾವಳಿಪುತ್ತೂರು;ಕೋಡಿಂಬಾಡಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯಿಂದ 16 ಬ್ಯಾಟರಿ ಕಳವು

ಪುತ್ತೂರು;ಕೋಡಿಂಬಾಡಿ ಪ್ರೌಢಶಾಲೆಯ ಕಂಪ್ಯೂಟರ್ ಕೊಠಡಿಯಿಂದ 16 ಬ್ಯಾಟರಿ ಕಳವು

- Advertisement -
- Advertisement -

ಪುತ್ತೂರು: ಪ್ರೌಢಶಾಲೆಯ ಕಂಪ್ಯೂಟರ್‌ ಕೊಠಡಿಯಿಂದ ಹಳೆಯ 16 ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ಕೋಡಿಂಬಾಡಿ ಶಾಂತಿನಗರದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಒಂದನೇ ಅಂತಸ್ತಿನಲ್ಲಿರುವ ಕಂಪ್ಯೂಟರ್‌ ಕೊಠಡಿಯಲ್ಲಿ ಇರಿಸಲಾಗಿದ್ದ ಕಂಪ್ಯೂಟರಿನ ಹಳೆಯ 16 ಬ್ಯಾಟರಿಗಳನ್ನು ಕಳವು ಮಾಡಲಾಗಿದೆ ಎಂದು ಮುಖ್ಯೋಪಾಧ್ಯಾಯರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಾ. 9ರಂದು ಶಾಲಾ ಅವಧಿಯ ಅನಂತರ ಕೊಠಡಿಯ ಬೀಗ ಮುರಿದು ಬ್ಯಾಟರಿಗಳನ್ನು ಕಳವು ಮಾಡಲಾಗಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!