Wednesday, June 26, 2024
Homeಕರಾವಳಿಚಾರ್ಮಾಡಿ: ವಿ.ಹಿಂ.ಪ, ಬಜರಂಗದಳ ವತಿಯಿಂದ ಶ್ರೀರಾಮ ಸೇವಾ ಹಸ್ತದ ಉದ್ಘಾಟನೆ

ಚಾರ್ಮಾಡಿ: ವಿ.ಹಿಂ.ಪ, ಬಜರಂಗದಳ ವತಿಯಿಂದ ಶ್ರೀರಾಮ ಸೇವಾ ಹಸ್ತದ ಉದ್ಘಾಟನೆ

spot_img
- Advertisement -
- Advertisement -

ಚಾರ್ಮಾಡಿ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಚಾರ್ಮಾಡಿ ಇದರ ಕಾರ್ಯಕರ್ತರಿಂದ ಹೊಸದಾಗಿ ರೂಪುಗೊಂಡ “ನೊಂದವರ ಜೊತೆಯಲ್ಲಿ ನಾವು” ಎಂಬ ವಾಕ್ಯದೊಂದಿಗೆ ಶ್ರೀರಾಮ ಸೇವಾ ಹಸ್ತ ಇದರ ಉದ್ಘಾಟನೆ ಕಾರ್ಯಕ್ರಮವು ದೀಪ ಬೆಳಗಿಸುವುದರ ಮೂಲಕ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಾಸ್ಥಾನದಲ್ಲಿ ಇಂದು ಜರುಗಿತು.

ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣದ ಅಡಿಗಲ್ಲು ಹಾಕುವ ಈ ದಿನದ ನೆನಪಿಗೋಸ್ಕರ ಕಾರ್ಯಕರ್ತರಿಂದ ರೂಪುಗೊಂಡ ಶ್ರೀರಾಮ ಸೇವಾ ಹಸ್ತದ ಉದ್ಘಾಟನೆಯನ್ನು ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರು ಪ್ರಕಾಶ್ ಹೊಸಮಠ , ಮಾಜಿ ಆಡಳಿತ ಮುಕ್ತೇಸರರಾದ ಕೃಷ್ಣಭಟ್ ಕೊಡಿತ್ತಿಲ್, ವಿಶ್ವ ಹಿಂದೂ ಪರಿಷತ್ ಚಾರ್ಮಾಡಿ ಇದರ ಮಾಜಿ ಅಧ್ಯಕ್ಷರು ಕೇಶವ ಮೂಲ್ಯ ಪಡೆಂಕಲ್ಲು, ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರು ಜಗದೀಶ್ ಮುಗುಳಿದಡ್ಕ, ಹಾಗೂ ಉಪಾಧ್ಯಕ್ಷ ಪವನ್ ರಾವ್ ಇವರು ನೆರವೇರಿಸಿದರು.

ಈ ಸಂದರ್ಭದಲ್ಲಿ “ಅಯ್ಯೋಧ್ಯೆ ಚಲೋ” ನಲ್ಲಿ ಭಾಗವಹಿಸಿದ ಬಾಲಕೃಷ್ಣ ಅಡಿಮಾರು ಮತ್ತು ಪ್ರಶಾಂತ್ ಕೊಳಂಬೆ ಇವರನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಗೌರವಿಸಲಾಯಿತು۔.

ಈ ಸಂದರ್ಭದಲ್ಲಿ ಶ್ರೀರಾಮ ಸೇವಾ ಹಸ್ತದ ಪದಾಧಿಕಾರಿಗಳಾದ ಪ್ರದೀಪ್ ಅಂತರ, ಸುಧೀರ್ ರಥಬೀದಿ, ಅಖಿಲೇಶ್ ರಾವ್, ಗಣೇಶ್ ಮಾರಂಗಾಯಿ, ಕಾರ್ತಿಕ್ ಮುದ್ದೊಟ್ಟು, ನಾಗೇಶ್ ಮೂಲ್ಯ, ಯೋಗೀಶ್ ಅಂತರ , ಕಿರಣ್ ವಲಸಾರಿ ,ಕಿರಣ್ ಕೆರೆಕೋಡಿ, ಕೃಷ್ಣ ಬೀಟಿಗೆ, ರಾಜೇಶ್ ಬಂಗ್ಲೆಗುಡ್ಡೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ದಿವಿನೇಶ್ ಮೈಕಾನ್ ನಿರೂಪಿಸಿದರು. ಕೊನೆಯಲ್ಲಿ ರಾಜೇಶ್ ಬಂಗ್ಲೆಗುಡ್ಡೆ ಇವರು ಧನ್ಯವಾದ ಸಮರ್ಪಣೆ ಮೂಲಕ ಕಾರ್ಯಕ್ರಮಕ್ಕೆ ಪೂರ್ಣವಿರಾಮ ನೀಡಲಾಯಿತು

- Advertisement -
spot_img

Latest News

error: Content is protected !!