Wednesday, June 26, 2024
Homeಕರಾವಳಿಗುಡ್ಡಕುಸಿತದ ಭೀತಿ: ಚಾರ್ಮಾಡಿ ಘಾಟಿಯ ವಾಹನ ಸಂಚಾರ ನಿಯಮದಲ್ಲಿ ಮಹತ್ವದ ಬದಲಾವಣೆ

ಗುಡ್ಡಕುಸಿತದ ಭೀತಿ: ಚಾರ್ಮಾಡಿ ಘಾಟಿಯ ವಾಹನ ಸಂಚಾರ ನಿಯಮದಲ್ಲಿ ಮಹತ್ವದ ಬದಲಾವಣೆ

spot_img
- Advertisement -
- Advertisement -

ಚಾರ್ಮಾಡಿ: ಮಲೆನಾಡಿನಲ್ಲಿ ಮುಂದುವರಿದಿರುವ ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯ ಸಂಚಾರ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿದೆ.

ಚಾರ್ಮಾಡಿ ಘಾಟ್ ರಸ್ತೆ ಇಂದಿನಿಂದ ಬೆಳಗ್ಗೆ 6 ರಿಂದ ರಾತ್ರಿ 7 ಗಂಟೆವರೆಗೆ ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಹಾಗೆ ರಾತ್ರಿಯ ವೇಳೆ ಎಲ್ಲಾ ವಾಹನಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮುಂದಿನ ಆದೇಶ ಬರುವ ವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಹಾಗೆಯೇ ಈ ಆದೇಶದಲ್ಲಿ ತುರ್ತು ವಾಹನಗಳ ಸಂಚಾರಕ್ಕೆ ರಾತ್ರಿ ಹಗಲು ಅನುಮತಿ ನೀಡಲಾಗಿದೆ.

- Advertisement -
spot_img

Latest News

error: Content is protected !!