Thursday, May 2, 2024
Homeಉತ್ತರ ಕನ್ನಡಅಂಕೋಲಾದಲ್ಲಿ ದ್ವೀಪದಂತಾದ ಹೋಟೆಲ್: ಲಾಕ್ ಆಗಿದ್ದವರು ಹೆಲಿಕಾಫ್ಟರ್ ನಲ್ಲಿ ಏರ್ ಲಿಫ್ಟ್

ಅಂಕೋಲಾದಲ್ಲಿ ದ್ವೀಪದಂತಾದ ಹೋಟೆಲ್: ಲಾಕ್ ಆಗಿದ್ದವರು ಹೆಲಿಕಾಫ್ಟರ್ ನಲ್ಲಿ ಏರ್ ಲಿಫ್ಟ್

spot_img
- Advertisement -
- Advertisement -

ಕಾರವಾರ: ಭಾರೀ ಮಳೆಯಿಂದಾಗಿ ನದಿ ಉಕ್ಕಿ ಹರಿದ ಪರಿಣಾಮ‌ ಹೋಟೆಲ್ ನಲ್ಲಿ ಸಿಲುಕಿದ್ದವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸುಂಕಸಾಳದ ನವಮಿ ಐಲ್ಯಾಂಡ್ ಹೋಟೆಲ್‌ನಲ್ಲಿ ಸಿಲುಕಿದ್ದವರ ರಕ್ಷಣೆ ಮಾಡಲಾಗಿದೆ.

ಗಂಗಾವಳಿ‌ ನದಿ ಉಕ್ಕಿ ಹರಿದ ಪರಿಣಾಮ ಹೋಟೆಲ್ ದ್ವೀಪದಂತಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿ 15 ಮಂದಿ ಸಿಲುಕಿದ್ದರು. ಹೋಟೆಲ್ ನ ಕೆಳ‌ ಅಂತಸ್ತಿನಲ್ಲಿ ನೀರು ತುಂಬಿದ್ದರಿಂದ ಆತಂಕ ಸೃಷ್ಟಿಯಾಗಿತ್ತು. ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ ಮಾಡಲಾಗಿದ್ದು, ಕಾರವಾರದ ಸೀಬರ್ಡ್ ನೌಕಾನೆಲೆಯ ಹೆಲಿಕಾಪ್ಟರ್ ಮೂಲಕ ಏರ್‌ಲಿಫ್ಟ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಗಂಗಾವಳಿ ನದಿ ಉಕ್ಕಿ ಹರಿದ ಕಾರಣ ಹೆದ್ದಾರಿ ಬಂದ್ ಆಗಿತ್ತು. ಹೋಟೆಲ್ ನಲ್ಲಿದ್ದ ಗ್ರಾಹಕರು ಮತ್ತು ಸಿಬ್ಬಂದಿ ಸೇರಿ 15 ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಈ ಮಧ್ಯೆ ಶಿರಸಿ ಮತ್ತು ಸಿದ್ದಾಪುರ ಭಾಗದಲ್ಲಿ ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ಕುಮಟಾ ತಾಲೂಕಿನಲ್ಲಿ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಮಟಾ ತಾಲೂಕಿನ ಹೆಗಡೆ, ದೀವಗಿ, ಮಿರ್ಜಾನ್ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮಗಳ ಸಂತ್ರಸ್ಥ ಜನರನ್ನು ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!