Friday, April 26, 2024
Homeತಾಜಾ ಸುದ್ದಿಲಾಕ್ ಡೌನ್ ನಲ್ಲೇ ಹಸೆಮಣೆ ಏರಿದ ಚಂದನ್ ಹಾಗೂ ಕವಿತಾ ಗೌಡ

ಲಾಕ್ ಡೌನ್ ನಲ್ಲೇ ಹಸೆಮಣೆ ಏರಿದ ಚಂದನ್ ಹಾಗೂ ಕವಿತಾ ಗೌಡ

spot_img
- Advertisement -
- Advertisement -

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾದ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷ್ಮೀ ಬಾರಮ್ಮ’ ಕೂಡ ಒಂದು. ಈ ಧಾರವಾಹಿಯಲ್ಲಿ ವೀಕ್ಷಕರ ಮನಗೆದ್ದಿದ್ದ ಜೋಡಿ ಅಂದ್ರೆ ಅದು ಚಂದನ್ ಹಾಗೂ ಕವಿತಾ ಗೌಡ ಜೋಡಿ. ಲಚ್ಚಿ ಹಾಗೂ ಚಂದು ನೋಡಿ ವೀಕ್ಷಕರು ಇದ್ದರೆ ಈ ರೀತಿ ಇರಬೇಕು ಜೋಡಿ ಅಂತಾ ಮನಸ್ಸಿನಲ್ಲೇ ಅಂದು ಕೊಂಡಿದ್ದರು. ಅನೇಕರು ನಿಜ ಜೀವನದಲ್ಲೂ ಇವರಿಬ್ಬರು ದಂಪತಿಗಳಾದ್ರೆ ಚೆನ್ನಾಗಿರುತ್ತೆ ಅಂದುಕೊಂಡಿದ್ದರು.ಅಲ್ಲದೇ ಧಾರಾವಾಹಿಯಿಂದ ಚಂದನ್ ಹೊರ ನಡೆದ ಬಳಿಕವೂ ಚಂದನ್ ಹಾಗೂ ಕವಿತಾ ಗೌಡ ಉತ್ತಮ ಸ್ನೇಹಿತರಾಗಿ ಮುಂದುವರೆದಿದ್ದರು.


ಅದರಲ್ಲೂ ಕಳೆದ ವರ್ಷದಿಂದ ಚಂದನ್ ಹಾಗೂ ಕವಿತಾ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರಪು. ಟ್ರಕ್ಕಿಂಗ್ ಟ್ರಿಪ್ ಅಂತಾ ಸ್ನಮಹಿತರ ಜೊತೆ ಸುತ್ತಾಡುತ್ತಿದ್ದಪರು. ಇದನ್ನು ಗಹಮನಿಸಿದ ಅಭಿಮಾನಿಗಳು ಇಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದ್ರೆ ಚಂದನ್ ಮತ್ತು ಕವಿತಾ ಗೌಡ ಅಂತಹದ್ದೇನಿಲ್ಲ ಅಂತಾ ಸಾಗು ಹಾಕುತ್ತಲೇ ಬಂದಿದ್ದರು. ಆದ್ರೆ ಪಟ್ಚು ಬಿಡದ ಅಭಿಮಾನಿಗಳು ನೀವಿಬಬರೂ ಮದುವೆಯಾದ್ರೆ ಚೆನ್ನಾಗಿರುತ್ತೆ ಅಂತಾ ಪದೇ ಪದೇ ಅವರ ಪೋಸ್ಟ್ ಗಳಿಗೆ ಕಮಂಟ್ ಮಾಡುತ್ತಲೇ ಇದ್ದು. ಇದೆಲ್ಲದರ ಮಧ್ಯೆ ಮೊನ್ನೆ ಚಂದನ ಅಭಿಮಾನಿಗಳಿಗೆ ಸಡನ್ ಶಾಕ್ ಕೊಟ್ಟಿದ್ದರು. ನಾವಿಬ್ಬರು ಎಂಗೇಜ್ ಮೆಂಟ್ ಮಾಡಿಕೊಳ್ಳುತ್ತಿರೋದಾಗಿ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ಹೇಳಿದ್ದರು. ಅದರಂತೆ ಏಪ್ರೀಲ್ 1 ರಂದು ಇಬ್ಬರು ರಿಂಗ್ ಬದಲಾಯಿಸಕೊಂಡಿದ್ದರು.


ಕೊರೊನಾ ಕಾರಣ ಕುಟುಂಬಸ್ಥರು, ಆಪ್ತೇಷ್ಟರು ಹಾಗೂ ಕೆಲ ಸ್ನೇಹಿತರು ಮಾತ್ರ ಕವಿತಾ ಗೌಡ ಹಾಗೂ ಚಂದನ್ ನಿಶ್ಚಿತಾರ್ಥಕ್ಕೆ ಸಾಕ್ಷಿಯಾಗಿದ್ದರು. ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಮೇ 14 ಹಾಗೂ 15 ರಂದು ಹಸೆಮಣೆ ಏರುತ್ತಾರೆ ಎಂದು ಹೇಳಲಾಗಿತ್ತು. ಬಳಿಕ ಕೊರೊನಾ ಆರ್ಭಟ ಹಿನ್ನೆಲೆ ಚಂದನ್ ತಮ್ಮ ಮದುವೆ ದಿನಾಂಕವನ್ನು ಮುಂದೂಡಿದ್ದಾರೆ ಸದ್ಯಕ್ಕೆ ಅವರ ಮದುವೆ ಕ್ಯಾನ್ಸಲ್ ಆಗಿದೆ ಅಂತಾ ಹೇಳಲಾಗುತ್ತಿತ್ತು. ಆದ್ರೆ ಇದೆಲ್ಲದರ ಮಧ್ಯೆ ಅಭಿಮಾನಿಗಳಿಗೆ ಸಡನ್ ಶಾಕ್ ಆಗಿದೆ.


ಸದ್ದಿಲ್ಲದೇ ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಚಂದನ್ ಹಾಗೂ ಕವಿತಾ ನಿನ್ನೆ ಹಸೆಮಣೆ ಏರಿದ್ದಾರೆ. ಲಾಕ್ಡೌನ್ ಮಧ್ಯೆ ಬೆಂಗಳೂರಿನ ಗೆಳೆಯನ‌ ಮನೆಯ ಮುಂದಿರೋ ಪ್ರಕೃತಿಯ ಮಡಿಲಿನಲ್ಲಿ ಸರಳವಾಗಿ ಸಪ್ತಪದಿ ತುಳಿದಿದ್ದಾರೆ ಚಂದನ್ ಹಾಗೂ ಕವಿತಾ ಗೌಡ. ಆ ಮೂಲಕ ತಮ್ಮ ಬಹುದಿನ ಪ್ರೀತಿಗೆ ಮದುವೆ ಎಂಬ ಅಧಿಕೃತ ಮುದ್ರೆ ಒತ್ತಿದ್ದಾರೆ. ಇನನು ನವಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಮುದ್ದಾದ ರೀಲ್ ಜೋಡಿ ರಿ.ಯಲ್ ಲೈಫ್ ನಲ್ಲೂ ಜೊತೆಯೆಗಾದ್ದರೆಕ ಅಭಿಮಾನಿಗಳಿ ಫುಲ್ ಖುಸಿಯಾಗಿದ್ದಾರೆ ಇಬ್ಬರೂ ನೂರ್ಲಕ ಖುಶಿಯಾಗಿರಲಿ ಎಂದು ಹಾರೈಸುತಕ್ತಕಿದ್ದಾರೆ.

- Advertisement -
spot_img

Latest News

error: Content is protected !!