Friday, June 5, 2026
Homeಕರಾವಳಿಕಡಬದಲ್ಲಿ ಅಣ್ಣನಿಗೆ ಕತ್ತಿಯಿಂದ ಕಡಿದ ತಮ್ಮ

ಕಡಬದಲ್ಲಿ ಅಣ್ಣನಿಗೆ ಕತ್ತಿಯಿಂದ ಕಡಿದ ತಮ್ಮ

- Advertisement -
- Advertisement -

ಕಡಬ: ಅಣ್ಣ ತಮ್ಮನ ಮಧ್ಯೆ ಜಗಳವಾಗಿ ಅಣ್ಣನಿಗೆ ತಮ್ಮನೇ ಕತ್ತಿಯಿಂದ ಕಡಿದ ಘಟನೆ ಕಡಬ ತಾಲೂಕಿನ ಮೂಜೂರು ಎಂಬಲ್ಲಿ ನಡೆದಿದೆ.

ಇಲ್ಲಿನ ಐತ್ತೂರು ಗ್ರಾಮದ ಮೂಜೂರು ಸಮೀಪದ ಮುಂಡಡ್ಕ ನಿವಾಸಿ ಧ್ರುವ ಕುಮಾರ್(35) ಗಾಯಗೊಂಡ ವ್ಯಕ್ತಿ.  ಸಹೋದರರ ನಡುವೆ ನಿನ್ನೆ ಸಂಜೆ ಜಗಳವುಂಟಾಗಿ ತಮ್ಮ ಪ್ರೀತಂ ಅಣ್ಣನಿಗೆ ಕತ್ತಿಯಿಂದ ಕಡಿದಿರುವುದಾಗಿ ತಿಳಿದುಬಂದಿದೆ. 

ಗಂಭೀರ ಗಾಯಗೊಂಡ ಅಣ್ಣನಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Latest News

error: Content is protected !!