Friday, June 26, 2026
Homeತಾಜಾ ಸುದ್ದಿಎಂಗೇಜ್ ಆದ ಕವಿತಾ- ಚಂದನ್: ಹೇಗಿತ್ತು ಚಿನ್ನು ಚಂದು ಎಂಗೇಜೇ ಮೆಂಟ್ ಸಂಭ್ರಮ?

ಎಂಗೇಜ್ ಆದ ಕವಿತಾ- ಚಂದನ್: ಹೇಗಿತ್ತು ಚಿನ್ನು ಚಂದು ಎಂಗೇಜೇ ಮೆಂಟ್ ಸಂಭ್ರಮ?

- Advertisement -
- Advertisement -

ಬೆಂಗಳೂರು: ಮೊನ್ನೆಯಷ್ಟೇ ತಮ್ಮ ಹಾಗೂ ಕವಿತಾ ಬಗ್ಗೆ ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ನಾವಿಬ್ಬರು ಮದುವೆಯಾಗುತ್ತಿದ್ದೇವೆ ಅನ್ನೋ ಮೂಲಕ ಚಂದನ್ ಹಾಗೂ ಕವಿತಾ ತೆರೆ ಎಳೆದಿದ್ದರು. ಅದರಂತೆ ನಿನ್ನೆ ಚಂದು ಹಾಗೂ ಚಿನ್ನು ಎಂಗೇಜ್ ಮೆಂಟ್ ನಡೆಯಿತು.

ಬೆಂಗಳೂರಿನಲ್ಲಿ ನಿನ್ನೆ ಚಂದನ್ ಕುಮಾರ್ ಹಾಗೂ ಕವಿತಾ ಗೌಡ ನಿಶ್ಚಿತಾರ್ಥ ನಡೆದಿದೆ. ಈ ಮೂಲಕ ಇಬ್ಬರೂ ಹೊಸ ಬಾಳಿಗೆ ಅಡಿ ಇಡಲು ಮುನ್ನುಡಿ ಬರೆದಿದ್ದಾರೆ.  ಆದರೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ  ದಿನಾಂಕವನ್ನು ಬಹಿರಂಗಪಡಿಸಿಲ್ಲ.

ಈ ಸಂಬಂಧ ನಿಶ್ಚಿತಾರ್ಥದ ಕೆಲ ಫೋಟೋಗಳನ್ನು ಇನ್‍ಸ್ಟಾದಲ್ಲಿ ಹಂಚಿಕೊಂಡಿರುವ ಚಂದನ್, ಜೀವನ ಸಂಗಾತಿ ಒಬ್ಬ ಉತ್ತಮ ಗೆಳೆಯ/ಗೆಳತಿಯಂತಿರಬೇಕು ಎಂಬುದನ್ನು ನಾನು ಕೇಳಿದ್ದೇನೆ. ಆದರೆ ನಮ್ಮ ಜೀವನದಲ್ಲಿ ಅದು ರಿವರ್ಸ್ ಆಗಿದೆ. ನಾವಿಬ್ಬರೂ ಜೀವನದ ಉತ್ತಮ ಪಾರ್ಟ್ನರ್ಸ್ ಆಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!