Thursday, June 4, 2026
Homeಕರಾವಳಿಉಡುಪಿನಾಳೆ (ಮೇ.9) ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿರುವ ಹಿಂದೂ ಫೈರ್ ಬ್ರ್ಯಾಂಡ್ ,...

ನಾಳೆ (ಮೇ.9) ಬಹುಕಾಲದ ಗೆಳೆಯನ ಜೊತೆ ಸಪ್ತಪದಿ ತುಳಿಯಲಿರುವ ಹಿಂದೂ ಫೈರ್ ಬ್ರ್ಯಾಂಡ್ , ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ

- Advertisement -
- Advertisement -

ಕುಂದಾಪುರ; ಹಿಂದೂ ಫೈರ್ ಬ್ರ್ಯಾಂಡ್, ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರು ನಾಳೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.

ಬಿಗ್ ಬಾಸ್ ಸೀಸನ್ 11 ರಲ್ಲಿ ಚೈತ್ರಾ ಕುಂದಾಪುರ ಅವರ ಮದ್ವೆ ವಿಚಾರ ಭಾರೀ ಸದ್ದು ಮಾಡಿತ್ತು. ಆದರೆ ಹುಡುಗನ ಬಗ್ಗೆ ಹಾಗೇ ಮದ್ವೆ ಬಗ್ಗೆ ಅವರು ಹಾರಿಕೆ ಉತ್ತರ ನೀಡುತ್ತಲೇ ಬಂದಿದ್ದರು. ಇದೀಗ ಅವರ ಮದ್ವೆ ವಿಚಾರ ರಟ್ಟಾಗಿದೆ. ನಾಳೆ ಅಂದರೆ ಮೇ.9 ರಂದು ಚೈತ್ರಾ ಅವರು ತಮ್ಮ ಬಹುಕಾಲದ ಗೆಳೆಯ ಶ್ರೀಕಾಂತ್ ಅವರನ್ನು ವರಿಸಲಿದ್ದಾರೆ. ಇವರಿಬ್ಬರದ್ದು 12 ವರ್ಷಗಳ ಪ್ರೀತಿ ಅಂತಾ ಚೈತ್ರಾ ಕುಂದಾಪುರ ಹೇಳಿದ್ದಾರೆ. ಕಾಲೇಜು ದಿನಗಳಿಂದಲೇ ಪರಸ್ಪರ ಪ್ರೀತಿಸುತ್ತಿದ್ದುದ್ದಾಗಿ ಹೇಳಿದ್ದಾರೆ.

ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇಗುಲದಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಗಳು ವಿವಾಹದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಇನ್ನು ಚೈತ್ರಾ ಕುಂದಾಪುರ ಮೆಹಂದಿ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!