Wednesday, April 14, 2021
Home ತಾಜಾ ಸುದ್ದಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನ

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಆತ್ಮಹತ್ಯೆಗೆ ಯತ್ನ

- Advertisement -
- Advertisement -

ಕೋಲಾರ : ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಅವರು ಕೋಲಾರ ನಗರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಮದುವೆಯಾದ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಚೈತ್ರಾ ಕೊಟ್ಟೂರು ಇದೀಗ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಅವರನ್ನು ಕೋಲಾರದ ಖಾಸಗಿ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮದುವೆ ವಿಚಾರವಾಗಿ ವಿವಾದದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಚೈತ್ರಾ ಕೊಟ್ಟೂರು ಅವರು ಮಾರ್ಚ್ 28 ರಂದು ಮಂಡ್ಯ ಮೂಲದ ನಾಗರ್ಜುನ್ ಜೊತೆಗೆ ಮದುವೆಯಾಗಿದ್ದರು. ಆದರೆ ನಾಗರ್ಜುನ್ ಗೆ ಚೈತ್ರಾ ಜೊತೆ ಮದುವೆಯಾಗಲು ಇಷ್ಟವಿರಲಿಲ್ಲ. ಸಂಘಟನೆಗಳ ಜೊತೆಗೂಡಿ ಬಲವಂತವಾಗಿ ಮದುವೆಯಾಗಿ ಮಾಡಿಸಲಾಗಿದೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ಮದುವೆಯಾದ ದಿನವೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

- Advertisement -
- Advertisment -

Latest News

error: Content is protected !!