Thursday, June 4, 2026
Homeಕರಾವಳಿಉಡುಪಿಬ್ರಹ್ಮಾವರ ; ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಕಳ್ಳತನ

ಬ್ರಹ್ಮಾವರ ; ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಕಳ್ಳತನ

- Advertisement -
- Advertisement -

ಬ್ರಹ್ಮಾವರ: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಕಳ್ಳತನ ಮಾಡಿರುವ ಘಟನೆ  ಚಾಂತಾರು ಗ್ರಾಮದ ರಕ್ತೇಶ್ವರಿ ಮಾರ್ಗ ಎಂಬಲ್ಲಿ ಜೂ.12ರಂದು ಮಧ್ಯಾಹ್ನ ವೇಳೆ ನಡೆದಿದೆ.

ಪಾರ್ವತಿ ಎಂಬವರು ತನ್ನ ಗಂಡ ಶಂಭು ಪೂಜಾರಿ ಜೊತೆ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಓರ್ವ ವ್ಯಕ್ತಿ ಪಾರ್ವತಿಯ ಕುತ್ತಿಗೆಯಲ್ಲಿದ್ದ ಮಾಂಗಲ್ಯವನ್ನು ಎಳೆದುಕೊಂಡು ಹೋಗಿ, ಮುಂದೆ ಬೈಕಿನಲ್ಲಿ ಕಾಯುತ್ತಿದ್ದ ಇನ್ನೋರ್ವನ ಜೊತೆ ಬ್ರಹ್ಮಾವರ ಪೇಟೆ ಕಡೆಗೆ ಪರಾರಿಯಾಗಿದ್ದಾನೆ ಎನ್ನಲಾಗಿದೆ.ಕಳವಾದ ಸರದ ಮೌಲ್ಯ 1,80,000ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!