Wednesday, May 8, 2024
Homeಇತರಮುಲ್ಕಿ: ಏಕಾಏಕಿ ಸಿಮೆಂಟ್ ಪೈಪ್ ಗಳು ಉರುಳಿ ಬಿದ್ದು ಬಾಲಕ ಸಾವು...!

ಮುಲ್ಕಿ: ಏಕಾಏಕಿ ಸಿಮೆಂಟ್ ಪೈಪ್ ಗಳು ಉರುಳಿ ಬಿದ್ದು ಬಾಲಕ ಸಾವು…!

spot_img
- Advertisement -
- Advertisement -

ಮುಲ್ಕಿ: ಮುಲ್ಕಿ ಸಮೀಪದ ಲಿಂಗಪ್ಪಯ್ಯಕಾಡು ಆಶ್ರಯ ಕಾಲೋನಿಯಲ್ಲಿ ತನ್ನ ಮನೆಯ ಸಮೀಪ ಆಟವಾಡುತ್ತಿದ್ದ ಯುವರಾಜ ಎಂಬ ನಾಲ್ಕು ವರ್ಷದ ಮಗುವಿನ ಮೇಲೆ ಸಿಮೆಂಟಿನ ಪೈಪ್ ಉರುಳಿಬಿದ್ದು ಮಗು ಸಾವನ್ನಪ್ಪಿದ ಘಟನೆ ನಡೆದಿದೆ.

ಮುಲ್ಕಿಯ ಲಿಂಗಪ್ಪಯ್ಯ ಕಾಡು ಆಶ್ರಯ ಕಾಲೋನಿಯಲ್ಲಿ ಕಳೆದ ಕೆಲ ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡು ತೀವ್ರ ಬಡತನದಲ್ಲಿ ವಾಸಿಸುತ್ತಿದ್ದ ರಾಮು ಮತ್ತು ಶಾಂತ ಎಂಬವರ ನಾಲ್ಕು ಮಕ್ಕಳಲ್ಲಿ ಕೊನೆಯವನಾದ ಯುವರಾಜನು ಮನೆಯ ಸಮೀಪದಲ್ಲಿ ಸಿಮೆಂಟ್ ಪೈಪ್ ರಾಶಿ ಹಾಕಿದ್ದಲ್ಲಿ ಆಟವಾಡಲು ತೆರಳಿದ್ದ ಎನ್ನಲಾಗಿದೆ.

ಇನ್ನು ಮಗು ಆಟವಾಡುತ್ತಿದ್ದ ಸಮಯದಲ್ಲಿ ಏಕಾಏಕಿ ಸಿಮೆಂಟಿನ ಪೈಪ್ ಗಳು ಮಗುವಿನ ಮೇಲೆ ಉರುಳಿ ಬಿದ್ದಿವೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಆಟವಾಡುತ್ತಿದ್ದ ಉಳಿದ ಮಕ್ಕಳು ಬೊಬ್ಬೆ ಹಾಕಿದ್ದಾರೆ ಮಕ್ಕಳ ಮನೆಯವರು ಓಡಿಬಂದು ತೀವ್ರ ಗಾಯಗೊಂಡಿದ್ದ ಯುವರಾಜನನ್ನು ಆಸ್ಪತ್ರೆಗೆ ಸಾಗಿಸಿದ್ದು ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ . ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!