Wednesday, May 15, 2024
Homeತಾಜಾ ಸುದ್ದಿರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮಹತ್ವದ ಟ್ವಿಸ್ಟ್ : ವಿಡಿಯೋ ರಿಲೀಸ್ ಮಾಡಿ ನಾನು ನಿರಪರಾಧಿ...

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಮಹತ್ವದ ಟ್ವಿಸ್ಟ್ : ವಿಡಿಯೋ ರಿಲೀಸ್ ಮಾಡಿ ನಾನು ನಿರಪರಾಧಿ ಅಂದ ಪ್ರಕರಣದ ಕಿಂಗ್ ಪಿನ್ ನರೇಶ್ ಗೌಡ

spot_img
- Advertisement -
- Advertisement -

ಬೆಂಗಳೂರು : ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ್ದು ಎನ್ನಲಾದಂತ ರಾಸಲೀಲೆ ವೀಡಿಯೋ ಪ್ರಕರಣದಲ್ಲಿ ಎಸ್ ಐಟಿ ತಂಡ ತನಿಖೆ ಚುರುಕುಗೊಳಿಸಿರುವ ಬೆನ್ನಲ್ಲೇ, ಶಂಕಿತ ಭವಿತ್ ತನ್ನ ಪಾತ್ರವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದರು. ಇವರ ಬಳಿಕ, ಇದೀಗ ಕಿಂಗ್ ಪಿನ್ ನರೇಶ್ ಕೂಡ ವೀಡಿಯೋ ರಿಲೀಸ್ ಮಾಡಿದ್ದು, ನನ್ನನ್ನು ಸಿಡಿ ಪ್ರಕರಣದ ಸಂತ್ರಸ್ತೆ ಸಂಪರ್ಕಿಸಿದ್ದರು, ಆದ್ರೇ ಸಿಡಿ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ. ತಾನು ಯಾವುದೇ ಹಣ ಕೂಡ ಪಡೆದಿಲ್ಲ. ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವಂತ ಹುನ್ನಾರ ನಡೆಸಿರುವುದಾಗಿ ತಿಳಿಸಿದ್ದಾನೆ.

ಈ ಕುರಿತಂತೆ ವೀಡಿಯೋ ರಿಲೀಸ್ ಮಾಡಿರುವಂತ ಸಿಡಿ ಪ್ರಕರಣದ ಕಿಂಗ್ ಪಿನ್ ನರೇಶ್, ನಾನು ಹಣ ಪಡೆದಿರುವ ಬಗ್ಗೆ ಸಾಕ್ಷಿ ಕೊಡಿ. ಸಿಡಿ ಕೇಸ್ ನಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ನಡೆದಿದೆ. ತಾನು ತನಿಖೆಗೆ ಬಂದ್ರೆ ಏನಾಗುತ್ತೆಂದು ಗೊತ್ತು. ಹಾಗಾಗಿ ನಾನು ತನಿಖೆಗೆ ಹಾಜರಾಗಿಲ್ಲ. ಸಿಡಿ ಕೇಸ್ ಗೂ ನನಗೂ ಸಂಬಂಧವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾನೆ.

 ಇನ್ನೂ ಮುಂದುವರೆದು ಮಾತನಾಡಿರುವಂತ ಅವರು, ಯುವತಿ ಜೊತೆ ಸಂಪರ್ಕ ಇದ್ದಿದ್ದು ಸತ್ಯ. ನಾನು ಪತ್ರಕರ್ತನಾಗಿದ್ದರಿಂದಾಗಿ, ಸ್ನೇಹಿತರಿಂದ ನಂಬರ್ ಪಡೆದು, ನನ್ನ ಸಂಪರ್ಕಿಸಿದ್ದು ನಿಜ. ಆದ್ರೇ ಆ ವೇಳೆಯಲ್ಲೇ ತನ್ನ ತಾಯಿಗೆ ಹುಷಾರ್ ಇರಲಿಲ್ಲ. ಹೀಗಾಗಿ ನಾನು ಸರಿಯಾಗಿ ಮಾತನಾಡಿರಲಿಲ್ಲ. ಆನಂತ್ರ ಒಮ್ಮೆ ಕರೆ ಮಾಡಿ, ಯಾಕ್ ಸಾರ್ ನಮಗೆ ನ್ಯಾಯ ಕೊಡಿಸೋದಿಲ್ವ ಎಂದು ಕೇಳಿದ್ರು. ಆಗ ನನ್ನ ತಾಯಿಗೆ ಹುಷಾರ್ ಇಲ್ಲದ್ದು, ಮಗಳ ನಾಮಕರಣದ ಬ್ಯುಸಿ ಬಗ್ಗೆ ತಿಳಿಸಿದೆ. ಯಾಕ್ ಸಾರ್ ನಮ್ಮನ್ನು ಕರೆಯೋದಿಲ್ವಾ ನಾಮಕರಣಕ್ಕೆ ಅಂದ್ರು. ಬಾರಮ್ಮ ಅಂದೆ.. ಹೀಗಾಗಿ ನಾಮಕರಣಕ್ಕೂ ಬಂದಿದ್ರು ಎಂದಿದ್ದಾನೆ.

ಈ ನಂತ್ರ, ಸಿಡಿ ರಿಲೀಸ್ ನಂತ್ರ, ಆ ವೈರಲ್ ದೃಶ್ಯ ನನ್ನ ಮೊಬೈಲ್ ಗೂ ಬಂತು. ಆಕೆಯ ಜೊತೆಗೆ ಮಾತನಾಡಿದ್ದಕ್ಕೆ ನನ್ನ ಸಿಲುಕಿಸೋ ಯತ್ನ ನಡೆಸಿದೆ. ನಾನು ನೋಟಿಸ್ ನೀಡಿದ ನಂತ್ರ ಎಸ್ ಐ ಟಿ ಮುಂದೆ ತನಿಖೆಗೆ ಹಾಜರಾಗುತ್ತಿದ್ದೆ. ಆದ್ರೇ.. ಅಲ್ಲಿ ಯುವತಿಗೆ ಆಗಿರುವಂತ ಅನ್ಯಾಯದ ಬಗ್ಗೆ ಯಾರು ಮಾತನಾಡದೇ, ರಮೇಶ್ ಜಾರಕಿಹೊಳಿಯವರನ್ನೇ ಸಂತ್ರಸ್ತನ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಹೀಗಾಗಿ ನಾನು ಸದ್ಯಕ್ಕೆ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತಿಲ್ಲ. ಒಂದು ನಾಲ್ಕೈದು ದಿನಗಳ ನಂತ್ರ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವೆ. ಆಗ ಎಲ್ಲವನ್ನೂ ಹೇಳುತ್ತೇನೆ. ಪ್ರಕರಣದಲ್ಲಿ ನಾನು ಒಂದೇ ಒಂದು ರೂಪಾಯಿ ಹಣ ಪಡೆದಿಲ್ಲ. ನನ್ನ ಮನೆಯ ಪರಿಸ್ಥಿತಿ ಹೋಗಿ ನೋಡಿ. ನಿಮಗೆ ಎಲ್ಲಾ ಗೊತ್ತಾಗಲಿದೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾನೆ.  

- Advertisement -
spot_img

Latest News

error: Content is protected !!