- Advertisement -
![]()
- Advertisement -
ಬೆಳ್ತಂಗಡಿ : ಹಲವಾರು ಮೃತದೇಹ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 28 ರಂದು ಧರ್ಮಸ್ಥಳ ಗ್ರಾಮದ ನೇತ್ರಾವತಿ ಪರಿಸರದಲ್ಲಿ ದೂರುದಾರನ ಸಮ್ಮುಖದಲ್ಲಿ ಎಸ್.ಐ.ಟಿ ಅಧಿಕಾರಿ ಮೃತದೇಹ ಹೂತು ಹಾಕಿರುವ ಜಾಗಗಳನ್ನು ಗುರುತು ಮಾಡುವ ವೇಳೆ ಎಸ್.ಐ.ಟಿ ತಂಡಕ್ಕೆ ಸಿಸಿಟಿ ತಂಡ ಕೂಡ ಸಹಕಾರ ನೀಡಿದೆ.

ಎಸ್.ಐ.ಟಿ ತನಿಖೆ ವೇಳೆ ಬೆಂಗಳೂರಿನಿಂದ ಆಗಮಿಸಿದ್ದ ಅಂತರಿಕ ಭದ್ರತಾ ವಿಭಾಗ(ISD)ಕ್ಕೆ ಸೇರಿದ ಸೆಂಟರ್ ಫಾರ್ ಕೌಂಟರ್ ಟೆರರಿಸಂ(CCT) ತಂಡದವರು ಡ್ರೋನ್ ಕ್ಯಾಮೆರಾದಲ್ಲಿ ತನಿಖೆಯ ಸಂಪೂರ್ಣ ಚಿತ್ರೀಕರಣ ಮಾಡುತ್ತಿದ್ದರು.
- Advertisement -


