Monday, May 6, 2024
Homeತಾಜಾ ಸುದ್ದಿಬೆಳ್ಳಂಬೆಳಗ್ಗೆ ನಟಿ ರಾಗಿಣಿಗೆ ಶಾಕ್ ಕೊಟ್ಟ ಸಿಸಿಬಿ ಅಧಿಕಾರಿಗಳು: ತುಪ್ಪದ ಹುಡುಗಿಯ ಮನೆ ಮೇಲೆ ದಾಳಿ

ಬೆಳ್ಳಂಬೆಳಗ್ಗೆ ನಟಿ ರಾಗಿಣಿಗೆ ಶಾಕ್ ಕೊಟ್ಟ ಸಿಸಿಬಿ ಅಧಿಕಾರಿಗಳು: ತುಪ್ಪದ ಹುಡುಗಿಯ ಮನೆ ಮೇಲೆ ದಾಳಿ

spot_img
- Advertisement -
- Advertisement -

ಬೆಂಗಳೂರು : ಡ್ರಗ್ಸ್‌ ಜಾಲದ ಕಿಂಗ್‌ ಪಿನ್‌ ಅನಿಕಾ ಬಂಧನದ ನಂತರ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ರಾಗಿಣಿ ಆತ್ಮೀಯ ಸ್ನೇಹಿತ ರವಿಶಂಕರ್‌ ಎಂಬಾತನನ್ನು ಬಂಧಿಸಿದ್ದಾರೆ. ಇನ್ನು ನಿನ್ನೆ ವಿಚಾರಣೆಗೆ ಹಾಜರಾಗುವಂತೆ ನಟಿ ರಾಗಿಣಿ ಅವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ನಟಿ ರಾಗಿಣಿ ವಿಚಾರಣೆಗೆ ಹಾಜರಾಗಿರಲಿಲ್ಲ. ಹಾಗಾಗಿ ಇಂದು ಬೆಳಗ್ಗೆಯೇ ಸಿಸಿಬಿ ಅಧಿಕಾರಿಗಳು ರಾಗಿಣಿಗೆ ಭರ್ಜರಿ ಶಾಕ್ ನೀಡಿದ್ದಾರೆ.

ಯೆಸ್. ಇಂದು ಬೆಳಗ್ಗೆಯೇ ಸಿಸಿಬಿ ಅಧಿಕಾರಿಗಳು ರಾಗಿಣಿಯ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಈ ಮೇಲೆ ಮಹತ್ವದ ಸುಳಿವುಗಳು ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ರೆ ರವಿಶಂಕರ್ ರಾಗಿಣಿ ಪಾಲಿಗೆ ಬಿಸಿ ತುಪ್ಪವಾದಂತೆ ಕಾಣಿಸುತ್ತಿದೆ.

- Advertisement -
spot_img

Latest News

error: Content is protected !!