- Advertisement -
- Advertisement -
ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿರುವ ಬೆನ್ನಲ್ಲೇ ಎ 6 ಆರೋಪಿ ಆದಿತ್ಯ ಆಳ್ವಾಗೆ ಸಿಸಿಬಿ ಶೋಧ ಕಾರ್ಯ ನಡೆಸುತ್ತಿದ್ದು, ವಿವೇಕ್ ಒಬೆರಾಯ್ ಅವರು ಆದಿತ್ಯಾ ಆಳ್ವಾಗೆ ಆಶ್ರಯ ನೀಡಿದ ಆರೋಪದ ಮೇರೆಗೆ ಮನೆ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಈ ಹಿಂದೆಯೇ ಒಬೆರಾಯ್ ಪತ್ನಿಗೆ ನೋಟಿಸ್ ಜಾರಿಗೊಳಿಸಿದ್ದು ಇದೀಗ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ಇನ್ನು ವಿಚಾರಣೆಗೆ ಗೈರಾದರೆ ಸಿಸಿಬಿ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ . ಮತ್ತೊಂದಡೆ ಈಗಾಗಲೇ ಎನ್ ಸಿಬಿ ತನಿಖೆ ನಡೆಸುತ್ತಿರುವ ಕಾರಣ ನಟ ವಿವೇಕ್ ಒಬೆರಾಯ್ ರನ್ನೂ ತನಿಖೆ ನಡೆಸುವ ಸಾಧ್ಯತೆ ಇದೆ.
- Advertisement -