Friday, June 26, 2026
Homeಕರಾವಳಿಸುಳ್ಯದಲ್ಲಿ ರಾತ್ರಿ ವೇಳೆ ಗೋವುಗಳ ಸಾಗಾಟ; ಪೊಲೀಸರಿಂದ ಪರಿಶೀಲನೆ

ಸುಳ್ಯದಲ್ಲಿ ರಾತ್ರಿ ವೇಳೆ ಗೋವುಗಳ ಸಾಗಾಟ; ಪೊಲೀಸರಿಂದ ಪರಿಶೀಲನೆ

- Advertisement -
- Advertisement -

ಸುಳ್ಯ: ಇಲ್ಲಿನ ಮೊಗರ್ಪಣೆ ಬಳಿ ಹಿಂದೂ ಪರ ಸಂಘಟಕರು ರಾತ್ರಿ ವೇಳೆ ಕಡಬದಿಂದ ಮೈಸೂರು ಕಡೆಗೆ ಗೋ ಸಾಗಾಟ ಮಾಡುತ್ತಿದ್ದ ವಾಹನವನ್ನು ತಡೆದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

ಮೊಗರ್ಪಣೆ ಮಸೀದಿ ಬಳಿ ಸಂಘಟನೆಯವರು ಕಡಬದಿಂದ ಟೆಂಪೋ ವಾಹನದಲ್ಲಿ ತರುತ್ತಿದ್ದ ಗೋವುಗಳನ್ನು ತಡೆದಿದ್ದಾರೆ. ಎರಡಕ್ಕೂ ಹೆಚ್ಚು ಗೋವುಗಳು ವಾಹನಗಳಿದ್ದು, ಸಂಘಟಕರು ಈ ಬಗ್ಗೆ ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಪೊಲೀಸರು ವಾಹನ ಮತ್ತು ಅದರಲ್ಲಿದ್ದ ಗೋವುಗಳನ್ನು ಹಾಗೂ ವ್ಯಕ್ತಿಗಳನ್ನು ಸುಳ್ಯ ಠಾಣೆಗೆ ಕರೆದು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳಕ್ಕೆ ಮೈಸೂರಿನಿಂದ ಬಂದಿದ್ದ ಯಾತ್ರಿಕರು ಕಡಬದಿಂದ ಗೋವುಗಳನ್ನು ಖರೀದಿಸಿ ತಮ್ಮೂರಿಗೆ ತೆಗೆದುಕೊಂಡು ಹೋಗುತ್ತಿದ್ದರು ಎಂದು ವಿಚಾರಣಾ ಸಮಯದಲ್ಲಿ ತಿಳಿದು ಬಂದಿದೆ. ಈ ವೇಳೆಯಲ್ಲಿ ಇದಕ್ಕೆ ಬೇಕಾದ ದಾಖಲೆಗಳೆಲ್ಲವೂ ಅವರ ಬಳಿ ಇದ್ದುದರಿಂದ ವಿಚಾರಣೆ ನಡೆಸಿ ಅವರನ್ನು ಬಿಟ್ಟು ಕಳಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!