Monday, May 20, 2024
Homeಅಪರಾಧಬೆಳ್ತಂಗಡಿ: ತಡೆಬೇಲಿಯ ಕ್ಯಾಶ್ ಬ್ಯಾರಿಯರ್ ಗಳು ನಾಪತ್ತೆ; ಕಿಡಿಗೇಡಿಗಳು ಹೊತ್ತೊಯ್ದಿರುವ ಶಂಕೆ ವ್ಯಕ್ತ

ಬೆಳ್ತಂಗಡಿ: ತಡೆಬೇಲಿಯ ಕ್ಯಾಶ್ ಬ್ಯಾರಿಯರ್ ಗಳು ನಾಪತ್ತೆ; ಕಿಡಿಗೇಡಿಗಳು ಹೊತ್ತೊಯ್ದಿರುವ ಶಂಕೆ ವ್ಯಕ್ತ

spot_img
- Advertisement -
- Advertisement -

ಬೆಳ್ತಂಗಡಿ: ಇಲ್ಲಿನ ಕಲಂಜ ಹಾಗೂ ಮುಂಡಾಜೆ ಗ್ರಾಮದ ನಿಡಿಗಲ್ ನೂತನ ಸೇತುವೆಯ ಸಮೀಪದ ಎರಡು ಬದಿಗಳಲ್ಲಿ ಅಳವಡಿಸಲಾಗಿದ್ದ ತಡೆಬೇಲಿಯ ಬಹುತೇಕ ಕ್ಯಾಶ್ ಬ್ಯಾರಿಯರ್‌ಗಳು ನಾಪತ್ತೆಯಾಗಿವೆ.


ಸುಮಾರು 108 ಮೀ. ಉದ್ದದ ಈ ಸೇತುವೆಯ ಎರಡು ಬದಿಗಳಲ್ಲೂ ಸುಮಾರು 200 ಮೀ. ನಷ್ಟು ಉದ್ದದ ಅಲ್ಯೂಮಿನಿಯಂ ತಡೆಬೇಲಿ ಹಾಕಲಾಗಿದೆ. ಅಲ್ಯೂಮಿನಿಯಂ ಪಟ್ಟಿಯ ತಡೆ ಬೇಲಿಯನ್ನು ಅಲ್ಯುಮಿನಿಯಂ ಕಂಬಗಳ ಆಧಾರದಲ್ಲಿ ನಿಲ್ಲಿಸಲಾಗಿದ್ದು, ಕಂಬ ಹಾಗೂ ತಡೆಬೇಲಿ ಮಧ್ಯೆ ಅಲ್ಯುಮಿನಿಯಂನ ಕ್ಯಾಶ್ ಬ್ಯಾರಿಯರ್‌ಗಳನ್ನು (ಪ್ಲೇಟ್ ಆಕಾರದ ಆಧಾರ) ಬೋಲ್ಟ್ ಅಳವಡಿಸಿ ಹೆಚ್ಚು ಬಲಿಷ್ಠಗೊಳಿಸಲಾಗಿದೆ.


ಆದರೆ ಇತ್ತೀಚಿನ ಕೆಲವು ದಿನಗಳಿಂದ ಈ ತಡೆಬೇಲಿಯ ಸುಮಾರು 50 ಕ್ಕೂ ಅಧಿಕ ಕ್ಯಾಶ್ ಬೇರಿಯರ್‌ಗಳು ನಾಪತ್ತೆಯಾಗಿವೆ. ತಡೆಬೇಲಿ ಹಾಗೂ ಕಂಬಗಳ ಸಂಪರ್ಕ ಕಲ್ಪಿಸುವ ಇವುಗಳ ಬೋಲ್ಟ್ ನಟ್ ಕಳಚಿ ಯಾರೋ ಕಿಡಿಗೇಡಿಗಳು ಹೊತ್ತೊಯ್ದಿರುವ ಶಂಕೆ ವ್ಯಕ್ತವಾಗಿದೆ.


ಒಂದೊಂದು ಕ್ಯಾಶ್ ಬ್ಯಾರಿಯರ್‌ಗಳು ಸುಮಾರು ನಾಲ್ಕರಿಂದ ಐದು ಕೆಜಿ ತೂಕ ಹೊಂದಿವೆ ಎನ್ನಲಾಗುತ್ತಿದೆ.ಕ್ಯಾಶ್ ಬ್ಯಾರಿಯರ್‌ಗಳನ್ನು ಕಳಚಿರುವ ಕಾರಣ ಎರಡು ಕಡೆಯ ತಡೆಬೇಲಿ ಬಲವನ್ನು ಕಳೆದುಕೊಂಡಿದೆ.
ಇಲ್ಲಿ ಉಳಿದಿರುವ ಬೆರಳೆಣಿಕೆಯ ಕ್ಯಾಶ್ ಬ್ಯಾರಿಯರ್ ಗಳು ಕಳಚಿಕೊಂಡರೆ ತಡೆಬೇಲಿ ಸಂಪೂರ್ಣ ನೆಲಕಚ್ಚಲಿವೆ. ತಡೆಬೇಲಿ ಹಾಗೂ ಈಗ ಅವುಗಳ ಸಂಪರ್ಕದ ಕಂಬಗಳ ಮಧ್ಯೆಯಾವುದೇ ಆಧಾರ ಇಲ್ಲದ ಕಾರಣದಿಂದ ವಾಹನಗಳು ಸಾಗುವ ವೇಳೆ ತಡೆಬೇಲಿ ಅಲುಗಾಡುವ ಹಂತವನ್ನು ತಲುಪಿದೆ.


ಮುಂದಿನ ದಿನಗಳಲ್ಲಿ ಇದರ ಅಲ್ಯೂಮಿನಿಯಂ ಕಂಬಗಳು ಹಾಗೂ ತಡೆಬೇಲಿಯು ನಾಪತ್ತೆಯಾಗುವ ಸಾಧ್ಯತೆಯ ಕುರಿತು ಅನುಮಾನಗಳು ಹುಟ್ಟಿಕೊಂಡಿದೆ.

- Advertisement -
spot_img

Latest News

error: Content is protected !!