Saturday, July 5, 2025
Homeಕರಾವಳಿಮಂಗಳೂರುಬೆಳ್ತಂಗಡಿ; ಅಕ್ರಮವಾಗಿ ಮಾರಾಟ ಮಾಡಲು ಅಂಗಡಿಯಲ್ಲಿ ದನದ ಮಾಂಸ ಶೇಖರಣೆ: ಇಬ್ಬರ  ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ; ಅಕ್ರಮವಾಗಿ ಮಾರಾಟ ಮಾಡಲು ಅಂಗಡಿಯಲ್ಲಿ ದನದ ಮಾಂಸ ಶೇಖರಣೆ: ಇಬ್ಬರ  ವಿರುದ್ಧ ಪ್ರಕರಣ ದಾಖಲು

spot_img
- Advertisement -
- Advertisement -

ಬೆಳ್ತಂಗಡಿ; ಅಕ್ರಮವಾಗಿ ಮಾರಾಟ ಮಾಡಲು ಅಂಗಡಿಯಲ್ಲಿ ದನದ ಮಾಂಸ ಶೇಖರಣೆ ಮಾಡಿದ ಆರೋಪದಡಿ ಇಬ್ಬರ  ವಿರುದ್ಧ ಪ್ರಕರಣ ದಾಖಲಾಗಿದೆ. ಅಬ್ದುಲ್‌ ರಜಾಕ್‌ ಹಾಗೂ ಮಲವಂತಿಗೆ ಗ್ರಾಮದ ಅಬ್ದುಲ್ ರವೂಫ್ (20) ವಿರುದ್ಧ ಪ್ರಕರಣ ದಾಖಲಾಗಿದೆ.

ದಿನಾಂಕ: 02-07-2025ರಂದು ಸಂಜೆ, ಬೆಳ್ತಂಗಡಿ ಮಿತ್ತಬಾಗಿಲು ಗ್ರಾಮದ ಕಾಜೂರು ಎಂಬಲ್ಲಿ, ಆರೋಪಿತನಾದ ಅಬ್ದುಲ್‌ ರಜಾಕ್‌ (28), ವಾಸ:ಮಲವಂತಿಗೆ ಗ್ರಾಮ, ಬೆಳ್ತಂಗಡಿ ಎಂಬವರಿಗೆ ಸಂಬಂದಪಟ್ಟ ಅಂಗಡಿಯಲ್ಲಿ, ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಜಾನುವಾರಿನ ಮಾಂಸವನ್ನು, ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಶೇಖರಿಸಿಟ್ಟಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ, ಯಲ್ಲಪ್ಪ ಹೆಚ್‌ ಮಾದರ, ಪೊಲೀಸು ಉಪ-ನಿರೀಕ್ಷಕರು ಬೆಳ್ತಂಗಡಿ ಪೊಲೀಸ್ ಠಾಣೆರವರು ಸಿಬ್ಬಂದಿಯೊಂದಿಗೆ ತೆರಳಿ ಪರಿಶೀಲಿಸಿದಾಗ, ಒಟ್ಟು 47 ಕೆಜಿ ದನ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಅಂಗಡಿಯೊಳಗೆ ಫ್ರಿಡ್ಜ್‌ ನೊಳಗೆ ಇರಿಸಿರುವುದು ಕಂಡುಬಂದಿರುತ್ತದೆ. ಸದ್ರಿ ಸೊತ್ತುಗಳನ್ನು ಮುಂದಿನ ಕಾನೂನುಕ್ರಮಕ್ಕಾಗಿ ಸ್ವಾಧೀನಪಡಿಸಿ, ಆರೋಪಿತರಾದ ಹಾಗೂ ಅಂಗಡಿಯಲ್ಲಿದ್ದ ಮತ್ತೋರ್ವ ಆರೋಪಿತ ಅಬ್ದುಲ್‌  ರವೂಪ್‌ (20) ವಾಸ:ಮಲವಂತಿಗೆ ಗ್ರಾಮ, ಬೆಳ್ತಂಗಡಿ ಎಂಬವರ ವಿರುದ್ಧ ದಿನಾಂಕ: 02-07-2025ರಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರ: 51/2025, ಕಲಂ: 4, 12 ಕರ್ನಾಟಕ ಗೋವದೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ  ಅದಿನಿಯಮ 2020 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ವಧೆ ಮಾಡಲಾದ ಜಾನುವಾರಿನ ಬಗ್ಗೆ ವಿಚಾರಿಸಲಾಗಿ, ಸಹೋದರರಾದ ಆರೋಪಿಗಳು ಅವರ ಮನೆಯಲ್ಲಿ ಸಾಕಿದ್ದ ಜಾನುವಾರನ್ನು ವಧೆ ಮಾಡಿ, ಮಾಂಸ ಮಾರಾಟಕ್ಕೆ ಯತ್ನಿಸಿರುವುದು ತನಿಖೆಯಲ್ಲಿ ತಿಳಿದುಬಂದಿರುತ್ತದೆ.

- Advertisement -
spot_img

Latest News

error: Content is protected !!