ಕಡಬ; ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ದಿನಾಂಕ: 27-04-2025 ರಂದು ರಾತ್ರಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಡಬ ತಾಲೂಕು ಪೆರಾಬೆ ಗ್ರಾಮದ ಪರಿಸರದಲ್ಲಿನ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪೆರಾಬೆ ಕಡೆಯಿಂದ ಆಲಂಕಾರು ಕಡೆಗೆ 3 ಕಾರುಗಳನ್ನು ಅದರ ಚಾಲಕರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ತೆರಳುತ್ತಿರುವುದು ಹಾಗೂ ಕಾರುಗಳಲ್ಲಿದ್ದ ಸಹ ಪ್ರಯಾಣಿಕರು ಅಪಾಯಕಾರಿಯಾಗಿ ಕಿಟಕಿಯಿಂದ ಹೊರಬಂದು ಬೊಬ್ಬೆ ಹಾಕುತ್ತಿರುವ ವಿಡಿಯೋ ಕಂಡುಬಂದಿರುತ್ತದೆ. ವಿಡಿಯೋವನ್ನು ಪರಿಶೀಲಿಸಿದಾಗ ಕಾರುಗಳ ಪೈಕಿ 02 ಕಾರುಗಳ ನೊಂದಣಿ ಸಂಖ್ಯೆ KA 19 ME 4400 ಹಾಗೂ KA 34 N 5909 ಆಗಿರುತ್ತದೆ. ಇನ್ನೊಂದು ಕಾರಿನ ನೋಂದಣಿ ಸಂಖ್ಯೆ ತಿಳಿದುಬಂದಿರುವುದಿಲ್ಲ. ಈ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಅ.ಕ್ರ: 30/2025 ಕಲಂ: 281, BNS-2023 184 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.