Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬಾಲಕಿಯೊಬ್ಬಳ ಮೃತದೇಹ ಆರೋಪ ಪ್ರಕರಣ: ಧರ್ಮಸ್ಥಳ ಪೊಲೀಸ್...

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬಾಲಕಿಯೊಬ್ಬಳ ಮೃತದೇಹ ಆರೋಪ ಪ್ರಕರಣ: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

- Advertisement -
- Advertisement -

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಕಾನೂನು ಬಾಹಿರವಾಗಿ ಬಾಲಕಿಯೊಬ್ಬಳ ಮೃತದೇಹವನ್ನು ಹೂತು ಹಾಕಲಾಗಿದೆ. ಮೃತದೇಹವನ್ನು ಹೂತು ಹಕಿರುವುದನ್ನು ತಾನು ನೋಡಿದ್ದೇನೆ ಎಂದು ಆಗಸ್ಟ್ 2 ರಂದು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ದೂರು ನೀಡಲು‌ ಬಂದಿದ್ದು. ವೇಳೆ ಹೇಳಿಕೆ ನೀಡಿದ್ದ ಜಯಂತ್ ಟಿ ಇದೀಗ ಈ ಬಗ್ಗೆ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದು ಪೊಲೀಸರು ಪಿಟಿಷನ್ ಮಾಡಿಕೊಂಡಿದ್ದಾರೆ.

ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಸ್ಟ್ 4 ರಂದು ಬಂದಿದ್ದು. ಅವರನ್ನು ಈ ಪ್ರಕರಣದ ಬಗ್ಗೆ ದೂರನ್ನು ಧರ್ಮಸ್ಥಳ ಠಾಣೆಗೆ ದೂರು ನೀಡುವಂತೆ ಸೂಚಿಸಿದ್ದು ಅದರಂತೆ ಜಯಂತ್ .ಟಿ ಅವರು ಧರ್ಮಸ್ಥಳ ಠಾಣೆಗೆ ತೆರಳಿ ಸಂಜೆ ದೂರನ್ನು ನೀಡಿದ್ದಾರೆ. ಈ ದೂರಿನ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ 200/DPS/2025 ರಂತೆ ದೂರನ್ನು ಸ್ವೀಕರಿಸಿಕೊಂಡಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!