Friday, June 28, 2024
Homeಇತರನದಿಗಳಿಗೆ ಕಲುಷಿತ ನೀರು ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕಾಗಿದೆ..! ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ...

ನದಿಗಳಿಗೆ ಕಲುಷಿತ ನೀರು ಸೇರ್ಪಡೆಯಾಗದಂತೆ ಎಚ್ಚರ ವಹಿಸಬೇಕಾಗಿದೆ..! ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ರಾಜ್ಯ ಹೈಕೋರ್ಟ್‌ಗೆ ಮಾಹಿತಿ..!

spot_img
- Advertisement -
- Advertisement -

ಮಂಗಳೂರು ಹೊರವಲಯದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮೂಲವಾಗಿರುವ ಫಲ್ಗುಣಿ ನದಿ ಹಾಗೂ ಮರವೂರು ಡ್ಯಾಂಗೆ ಪಚ್ಚನಾಡಿ ಘನತ್ಯಾಜ್ಯ ಯಾರ್ಡ್‌ನ ಲ್ಯಾಂಡ್‌ಫಿಲ್ಲಿಂಗ್‌ ಪ್ರದೇಶದಿಂದ ಹೊರಹರಿಯುವ ಕಲುಷಿತ ನೀರು ಸೇರ್ಪಡೆಯಾಗಿ ಮಲಿನಗೊಂಡಿದ್ದು ಆರೋಗ್ಯಕ್ಕೆ ಹಾನಿಕಾರಿ ಅಂಶ ಗಳನ್ನು ಒಳಗೊಂಡಿದೆ ಎಂದು ಎಂಬುದಾಗಿ ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಮಾಹಿತಿಯಲ್ಲಿ ಹೊರಗೆಡವಿರುವ ಅಂಶಗಳು ನಿಜಕ್ಕೂ ಆಘಾತಕಾರಿಯಾಗಿದ್ದು ಇದನ್ನು ಗಂಭೀರ ವಾಗಿ ಪರಿಗಣಿಸಿ ಸೂಕ್ತ ಕ್ರಮಗಳಿಗೆ ಮುಂದಾಗಬೇಕಾದ ತುರ್ತು ಅವಶ್ಯಕತೆ ಇದೆ.

ಕಲುಷಿತ ನೀರು, ತ್ಯಾಜ್ಯಗಳು ಸೇರಿ ಕುಡಿಯುವ ನೀರು ಮಲಿನಗೊಳ್ಳುತ್ತಿರುವುದು ಕೇವಲ ಫಲ್ಗುಣಿ, ಮರವೂರು ಡ್ಯಾಂನ ಸಮಸ್ಯೆ ಮಾತ್ರ ಅಲ್ಲ. ಮಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನೇತ್ರಾವತಿ ನದಿ ಕೂಡ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ.

ಮರವೂರು ಡ್ಯಾಂನಿಂದ ಸುತ್ತಮುತ್ತಲಿನ ಸುಮಾರು 20 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದೀಗ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬಹಿರಂಗ ಪಡಿಸಿರುವ ಮಾಹಿತಿ ಡ್ಯಾಂನ ಕುಡಿಯುವ ನೀರಿನ ಶುದ್ಧತೆಯ ವಾಸ್ತವಿಕತೆಯನ್ನು ಬಹಿರಂಗ ಪಡಿಸಿದೆ ಮಾತ್ರವಲ್ಲದೆ ಜನರ ಆರೋಗ್ಯದ ಕುರಿತಂತೆಯೂ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರವಾಗಿದೆ.

ಪರಿಸರ ನಿಯಂತ್ರಣ ಮಂಡಳಿಯ ಮಾಹಿತಿ ತುಂಬೆ ವೆಂಟೆಡ್‌ಡ್ಯಾಂನ ನೀರಿನ ಶುದ್ದತೆಯ ಬಗ್ಗೆಯೂ ಗಮನಹರಿಸುವಂತೆ ಮಾಡಿದೆ. ಇಲ್ಲಿಯೂ ಕಲುಷಿತ ನೀರು ಸೇರ್ಪಡೆಯಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಎಚ್ಚರಿಕೆಯನ್ನು ರವಾನಿಸಿದೆ.

- Advertisement -
spot_img

Latest News

error: Content is protected !!